ಬೆಂಗಳೂರು: ಮೊಘಲ್ ದೊರೆ ಔರಂಗಜೇಬನ ಸಮಾಧಿ ಸ್ಥಳಕ್ಕೆ ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಒವೈಸಿ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತವಾದ ಟೀಕೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಪ್ರತಿಕ್ರಿಯಿಸಿದ್ದಾರೆ.

'ನಾವು ಸಹಿಷ್ಣುಗಳು. ಸಹಿಷ್ಣುಗಳಾಗಿಯೇ ಉಳಿಯುತ್ತೇವೆ. ಇದು ಮುಕ್ತ ರಾಷ್ಟ್ರ. ಯಾರನ್ನು ಬೇಕಿದ್ದರೂ ಆರಾಧಿಸಬಹುದು. ಎಲ್ಲರಿಗೂ ಸಮಾನ ಹಕ್ಕು ಇದೆ' ಎಂದು ರವೀನಾ ಟಂಡನ್ ಹೇಳಿದ್ದಾರೆ.

ಅಕ್ಬರುದ್ದೀನ್ ಒವೈಸಿ ಗುರುವಾರ ಮಹಾರಾಷ್ಟ್ರದ ಔರಂಗಾಬಾದ್‌ನ ಖುಲ್ದಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿಗೆ ಭೇಟಿ ನೀಡಿದ್ದರು.

'ಗುರು ತೇಜ್ ಬಹಾದೂರ್ ಅವರ ಶಿರಚ್ಛೇದ ಮಾಡಿದ, ಸಂಭಾಜಿ ಮಹಾರಾಜನ ತಲೆ ಕಡಿದವನ, ಕಾಶಿಯನ್ನು ನಾಶ ಮಾಡಿದವನ ಹಾಗೂ 49 ಲಕ್ಷ ಹಿಂದೂಗಳನ್ನು ಸಾಯಿಸಿದ ರಾಕ್ಷಸನ ಸಮಾಧಿಗೆ ಹೋಗಿ ನಮಿಸುವುದು ಕೆರಳಿಸುವ ಮನೋರೋಗದ ಕೃತ್ಯ' ಎಂದು ಲೇಖಕ, ಅಂಕಣಕಾರ ಆನಂದ ರಂಗನಾಥನ್ ಅವರು ಟೀಕಿಸಿದ್ದರು.

ಹಣದುಬ್ಬರ ಶ್ರೀಮಂತರನ್ನು ಹೆಚ್ಚು ಬಾಧಿಸುತ್ತಿದೆ: ಸಚಿವೆ ಹೇಳಿಕೆಗೆ ಸ್ವಾಮಿ ತರಾಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.