ತಿರುವನಂತಪುರ: ಲೆಬನಾನ್‌ನಲ್ಲಿನ ಪೇಜರ್ ಸ್ಫೋಟ ಪ್ರಕರಣದ ನಂಟು ಹೊಂದಿರುವ ಆರೋಪ ಹೊತ್ತಿರುವ ಬಲ್ಗೇರಿಯನ್‌ನ ಕಂಪನಿಯು ಕೇರಳ ಮೂಲದ ವ್ಯಕ್ತಿಗೆ ಸೇರಿದ್ದಾಗಿದೆ.

ಕೇರಳ ಮೂಲದ ರಿನ್ಸನ್ ಜೋಸ್(39) ಅವರಿಗೆ ಸೇರಿದ ನೋರ್ಟ ಗ್ಲೋಬಲ್ ಸಂಸ್ಥೆಯು, ಪೇಜರ್‌ಗಳ ಖರೀದಿಗಾಗಿ ಹಣ ವರ್ಗಾವಣೆ ಮಾಡಿರುವುದಾಗಿ ವರದಿಗಳು ತಿಳಿಸಿವೆ. ಆದರೆ ಸ್ಫೋಟ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

10 ವರ್ಷಗಳ ಹಿಂದೆ ವಯನಾಡ್ ಜಿಲ್ಲೆಯ ಮಾನಂದವಾಡಿಯಿಂದ ವಿದೇಶಕ್ಕೆ ತೆರಳಿದ್ದ ರಿನ್ಸನ್ ಅವರು ನಾರ್ವೆ ದೇಶದ ಪೌರತ್ವವನ್ನು ಹೊಂದಿದ್ದಾರೆ. 10 ತಿಂಗಳ ಹಿಂದೆ ಅಂದರೆ ನವೆಂಬರ್‌ನಲ್ಲಿ ಕೇರಳದಲ್ಲಿರುವ ತಮ್ಮ ಮನೆಗೆ ಭೇಟಿ ನೀಡಿದ್ದ ಅವರು, ಜನವರಿಯಲ್ಲಿ ಹಿಂತಿರುಗಿದ್ದರು.

‘ರಿನ್ಸನ್ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಷ್ಟೆ ನಮಗೆ ಗೊತ್ತು. ಅವರು ಕಂಪನಿ ನಡೆಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಕೆಲಸ ದಿನಗಳ ಹಿಂದೆ ಅವರು ಸಂಬಂಧಿಕರನ್ನು ಸಂಪರ್ಕ ಮಾಡಿದ್ದರು. ಅವನು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರಲು ಸಾಧ್ಯವಿಲ್ಲ’ ಎಂದು ರಿನ್ಸನ್ ಸಂಬಂಧಿ ತಂಗಚ್ಚನ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.