ರಾಯಪುರ: ಎಐಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಶನಿವಾರ ಛತ್ತೀಸ್ಗಢದ ರಾಯಪುರಕ್ಕೆ ಆಗಮಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರನ್ನು ಸ್ವಾಗತಿಸಲು ಇಡೀ ರಸ್ತೆಯನ್ನೇ ಗುಲಾಬಿ ಹೂವಿನ ದಳಗಳಿಂದ ಸಿಂಗರಿಸಲಾಗಿತ್ತು.

ಗುಲಾಬಿ ದಳಗಳಿಂದಾಗಿ ರಸ್ತೆ ಕೆಂಪಗೆ ಕಾಣುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ನಂತರ ಗುಲಾಬಿಯಿಂದ ಸಿಂಗರಿಸಿದ್ದ ರಸ್ತೆ ಮೂಲಕ ಕರೆತಂದರು.

ಕಾಂಗ್ರೆಸ್ನ 85ನೇ ಮಹಾ ಅಧಿವೇಶನವು ರಾಯಪುರದಲ್ಲಿ ಶುಕ್ರವಾರದಿಂದ ಆರಂಭವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಇದರ ಅಧ್ಯಕ್ಷತೆ ವಹಿಸಿದ್ದಾರೆ. ಕಾಂಗ್ರೆಸ್ ಸಂಚಾಲನಾ ಸಮಿತಿ ಸಭೆ ಶುಕ್ರವಾರ ಬೆಳಗ್ಗೆ ನಡೆಯಿತು.

ಈ ಸಭೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಾಜರಾಗಿರಲಿಲ್ಲ. ಇಂದು ನಡೆಯುತ್ತಿರುವ ಮಹಾ ಅಧಿವೇಶನದಲ್ಲಿ ಮೂವರೂ ಭಾಗವಹಿಸಿದ್ದಾರೆ.

ಇವುಗಳನ್ನೂ ಓದಿ

Video| ಜಮ್ಮು–ಕಾಶ್ಮೀರದಲ್ಲಿ ಸ್ನೋ ಸ್ಕೂಟರ್ ಸವಾರಿ ಮಾಡಿದ ರಾಹುಲ್ – ಪ್ರಿಯಾಂಕಾ

Video| ‘ನಾ ನಾಯಕಿ‘ಯಲ್ಲಿ ಪ್ರಿಯಾಂಕಾ ಮಿಂಚು : ಗೃಹಿಣಿಯರಿಗೆ ತಿಂಗಳಿಗೆ ₹2 ಸಾವಿರ ಘೋಷಣೆ

ರಾಜೀವ್ ಹತ್ಯೆ ಕುರಿತು ಪ್ರಿಯಾಂಕಾ ಪ್ರಶ್ನೆಗಳನ್ನು ಕೇಳಿದ್ದರು: ನಳಿನಿ ಶ್ರೀಹರನ್

ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ, ಪಕ್ಷಕ್ಕೆ ದೊಡ್ಡ ತಿರುವು ಎಂದು ಬಣ್ಣನೆ

ನಿವೃತ್ತ ನೌಕರ ಸಾವು: ಇದೇನಾ ಅಚ್ಛೇ ದಿನದ ವೈಭವ, ಬಿಜೆಪಿ ವಿರುದ್ಧ ಕಾಂಗ್ರೆಸ್ ಗರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.