ನವದೆಹಲಿ: ಉತ್ತರ ಪ್ರದೇಶದ ಸಂಭಲ್ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸಮಾಜದಲ್ಲಿ ಒಡಕುಗಳನ್ನು ಸೃಷ್ಟಿಸುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಬೇಕೆಂದು ವಯನಾಡ್ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

ಸಂಭಲ್ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವಿರೋಧಿಸಿ ಪ್ರತಿಭಟನಕಾರರು ನಡೆಸಿದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದು, ಭದ್ರತಾ ಸಿಬ್ಬಂದಿ ಸೇರಿ ಹಲವು ಗಾಯಗೊಂಡಿದ್ದಾರೆ.
.ಲೋಕಸಭೆ ಅಧಿವೇಶನ | ವಿಪಕ್ಷಗಳ ಗದ್ದಲ; ನ.27ಕ್ಕೆ ಕಲಾಪ ಮುಂದೂಡಿಕೆ.ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಫ್ ನೋಟಿಸ್: ಗೃಹ ಸಚಿವ ಜಿ. ಪರಮೇಶ್ವರ .
‘ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಅಧಿಕಾರದಲ್ಲಿರುವವರೇ ತಾರತಮ್ಯ, ದಬ್ಬಾಳಿಕೆ ಹಾಗೂ ಸಮಾಜ ವಿಭಜನೆಗೆ ಯತ್ನಿಸುತ್ತಿದ್ದಾರೆ. ಇಂತಹ ನಡುವಳಿಕೆ ಜನರ ಅಥವಾ ದೇಶದ ಹಿತಾಸಕ್ತಿಗೆ ಮಾರಕವಾಗುತ್ತದೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಅರಿತು ನ್ಯಾಯವನ್ನು ನೀಡಬೇಕು‘ ಎಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

‘ಎಲ್ಲ ಸಂದರ್ಭಗಳಲ್ಲೂ ಶಾಂತಿ ಕಾಪಾಡಬೇಕು ಎಂದು ರಾಜ್ಯದ ಜನತೆಗೆ ಪ್ರಿಯಾಂಕಾ ಮನವಿ‘ ಮಾಡಿದ್ದಾರೆ.
.Video | ಜಮ್ಮು ಕಾಶ್ಮೀರ: ಹಿಮದ ಮಧ್ಯೆ ಪ್ರವಾಸಿಗರ ಮೋಜು.ಅಧಿವೇಶನ | ಸಂಸತ್ತಿನ ಮೇಲೆ ಹಿಡಿತ ಸಾಧಿಸಲು ಕೆಲವರಿಂದ ಗೂಂಡಾಗಿರಿ ಯತ್ನ: ಮೋದಿ .
‘ಅಮಾಯಕರ ಹತ್ಯೆಗೆ ಸಿಎಂ ಆದಿತ್ಯನಾಥ್ ಆಡಳಿತವೇ ಸಂಪೂರ್ಣ ಹೊಣೆಯಾಗಿದೆ. ಸಂಭಾಲ್ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಬಿಜೆಪಿ-ಆರ್ಎಸ್ಎಸ್ ಕಾರಣ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.

ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದ್ದು, ನ.30ರವರೆಗೆ ಹೊರಗಿನ ಜನರ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶಿಸಿದೆ.
.Indian Politics | ಮಹಾ ಚುನಾವಣೆ ಫಲಿತಾಂಶ: ಪಕ್ಷದ ಆತ್ಮಾವಲೋಕನದ ಸಮಯ: ಸುಳೆ.ಉತ್ತರ ಪ್ರದೇಶ | ಸಂಭಲ್ ಹಿಂಸಾಚಾರ; ನಿಷೇಧಾಜ್ಞೆ, ಹೊರಗಿನವರ ಪ್ರವೇಶಕ್ಕೆ ನಿರ್ಬಂಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.