ನವದೆಹಲಿ (ಪಿಟಿಐ): ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ, ವಿವಿಧ ಸಂಶೋಧನೆಗಳಲ್ಲಿ ತೊಡಗಿರುವ 1,100ಕ್ಕೂ ಹೆಚ್ಚು ವಿಜ್ಞಾನಿಗಳು, ಪ್ರಧಾನ ವೈದ್ಯಕೀಯ ಸಂಸ್ಥೆಯಲ್ಲಿ ಒಬ್ಬರು ಸಂಶೋಧನಾ ಯೋಜನೆಗಳಲ್ಲಿ ಇಂತಿಷ್ಟು ವರ್ಷಗಳವರೆಗೆ ಮಾತ್ರ ಕೆಲಸ ಮಾಡಬಹುದೆಂದು ಮಿತಿ ಹೇರುವ ಆಡಳಿತ ಮಂಡಳಿಯ ಪ್ರಸ್ತಾವ ವಿರೋಧಿಸಿ ಪ್ರತಿಭಟಿಸಿದ್ದಾರೆ.

ಪ್ರಸ್ತಾಪಿತ ನಿಯಮಗಳನ್ನು ಶಾಂತಿಯುವಾಗಿ ವಿರೋಧಿಸುತ್ತಿರುವ ವಿಜ್ಞಾನಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಚಳವಳಿ ತೀವ್ರಗೊಳಿಸಲು ಯೋಜಿಸಿದ್ದಾರೆ. ಏಮ್ಸ್ ಆಡಳಿತದ ವಿರುದ್ಧ ಮಂಗಳವಾರ ಮೌನ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.

ಯುವ ವಿಜ್ಞಾನಿಗಳ ಸಂಘದ (ಎಸ್ವೈಎಸ್) ಪ್ರಕಾರ, ಪ್ರಸ್ತಾವಿತ ಮಾರ್ಗಸೂಚಿಗಳು ಸಂಶೋಧಕರು ತೆಗೆದುಕೊಳ್ಳಬಹುದಾದ ಸಂಶೋಧನಾ ಪ್ರಾಜೆಕ್ಟ್ಗಳ ಸಂಖ್ಯೆಯನ್ನು ಎರಡಕ್ಕೆ ಮಿತಿಗೊಳಿಸುತ್ತವೆ. ‘ಇದು ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಸಂಶೋಧನಾ ಉದ್ಯೋಗಿಗಳನ್ನು ಹಂತಹಂತವಾಗಿ ಹೊರಹಾಕುವ ಆಡಳಿತ ಮಂಡಳಿಯ ಹುನ್ನಾರ’ ಎಂದು ಎಸ್ವೈಎಸ್ ಆರೋಪಿಸಿದೆ.

ಏಮ್ಸ್ ನಿರ್ದೇಶಕರಿಗೆ ಎಸ್ವೈಎಸ್ ಬರೆದಿರುವ ಪತ್ರದಲ್ಲಿ ‘ತಮ್ಮ ವೃತ್ತಿಜೀವನದ ಅಮೂಲ್ಯ ವರ್ಷಗಳನ್ನು ವೈಜ್ಞಾನಿಕ ಕ್ಷೇತ್ರಕ್ಕೆ ಮಾತ್ರವಲ್ಲದೆ ಏಮ್ಸ್ಗಾಗಿ ಮೀಸಲಿಡಲು ನಿರ್ಧರಿಸಿರುವ ಸಂಶೋಧಕರನ್ನು ತಡೆಯುವುದು ‘ಭಯಾನಕ, ಅನಪೇಕ್ಷಿತ’ವಾದುದು. ಯಾವುದೇ ವ್ಯಕ್ತಿ ನವದೆಹಲಿಯ ಏಮ್ಸ್ನಲ್ಲಿ ಕೆಲಸ ಮಾಡಬಹುದಾದ ಗರಿಷ್ಠ ಅವಧಿ ಮತ್ತು ಕೈಗೊಳ್ಳುವ ಪ್ರಾಜೆಕ್ಟ್ಗಳ ಸಂಖ್ಯೆ ಮಿತಿಗೊಳಿಸುವ ನಿಯಮವನ್ನು ಮುಂದಿನ ಕೆಲವು ದಿನಗಳಲ್ಲಿ ಪರಿಚಯಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಗೌರವ ತರುವುದಿಲ್ಲವೆನ್ನುವುದನ್ನು ನಿಮಗೆ ತಿಳಿಸುವುದು ನಮಗೆ ಅನಿವಾರ್ಯವಾಗಿದೆ. ಅಂತಹ ನಿರ್ಧಾರವನ್ನು ಈ ಸಂಸ್ಥೆಯ ಸಂಶೋಧಕರು ಸಕಾರಾತ್ಮಕವಾಗಿ ಸ್ವೀಕರಿಸುವುದಿಲ್ಲ’ ಎಂದು ಹೇಳಲಾಗಿದೆ.

ಹೊಸ ನಿಯಮಗಳು ಜಾರಿಗೆ ಬರುವವರೆಗೂ, ಸಂಸ್ಥೆಯು ಸಂಶೋಧನಾ ಪ್ರಾಜೆಕ್ಟ್ಗಳಿಗೆ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿದೆ. ‘ಮುಂದಿನ ಸೂಚನೆ ಬರುವವರೆಗೂ ಎಲ್ಲ ಸಂಶೋಧನಾ ಪ್ರಾಜೆಕ್ಟ್ಗಳಿಗೆ ನೇಮಕಾತಿಗಳನ್ನು ತಡೆಹಿಡಿಯುವ ಏಮ್ಸ್ನ ಕ್ರಮವು ಸಂಶೋಧನಾ ಮತ್ತು ವಿಜ್ಞಾನದ ಚಟುವಟಿಕೆಗಳಿಗೆ ವಿರುದ್ಧವಾದುದು’ ಎಂದೂ ಎಸ್ವೈಎಸ್ನ ಸದಸ್ಯರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.