ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ಟಿ. ಅವರ ಮಾಲೀಕತ್ವದ ಕಂಪನಿ ಮತ್ತು ಕೊಚ್ಚಿ ಮೂಲದ ವಿವಾದಿತ ಗಣಿಗಾರಿಕೆ ಕಂಪನಿ ನಡುವಿನ ಅವ್ಯವಹಾರದ ಆರೋಪ ಕುರಿತು ‘ಗಂಭೀರ ವಂಚನೆ ಪ್ರಕರಣಗಳ ತನಿಖಾ ವಿಭಾಗ’ದಿಂದ (ಎಸ್ಎಫ್ಐಒ) ತನಿಖೆ ಆರಂಭಿಸಲಾಗಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಎಸ್ಎಫ್ಐಒ ತನಿಖೆಗೆ ಆದೇಶಿಸಿದೆ.

ತಮ್ಮ ಪತ್ನಿಯ ನಿವೃತ್ತಿಯಿಂದ ಬಂದ ಹಣದಿಂದ ತನ್ನ ಮಗಳು ಉದ್ಯಮ ಆರಂಭಿಸಿದ್ದರು ಎಂದು ರಾಜ್ಯ ವಿಧಾನಸಭೆಯಲ್ಲಿ ವಿಜಯನ್ ಅವರು ಬುಧವಾರ ಹೇಳಿದ್ದರು.

ಮುಖ್ಯಮಂತ್ರಿ ಅವರ ಮಗಳಾದ ವೀಣಾ ಟಿ. ಅವರ ಬೆಂಗಳೂರು ಮೂಲದ ಎಕ್ಸಾಲಾಜಿಕ್ ಸೊಲ್ಯುಷನ್ಸ್ ಸಂಸ್ಥೆಗೆ ಕೊಚ್ಚಿ ಮೂಲದ ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಸಂಸ್ಥೆಯು ₹1.72 ಕೋಟಿ ಪಾವತಿ ಮಾಡಿತ್ತು. ಕಾನೂನು ವ್ಯವಹಾರದ ಭಾಗವಾಗಿ ಈ ಹಣಕಾಸು ವ್ಯವಹಾರ ನಡೆದಿದೆ ಎಂದು ಸಿಪಿಎಂ ಹೇಳಿತ್ತು.

ಸೇವೆಗಳನ್ನು ಪೂರೈಸಿರುವುದಕ್ಕೆ ಹಣ ಸಂದಾಯವಾಗಿದೆ ಎನ್ನುವುದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸುವಲ್ಲಿ ಬೆಂಗಳೂರಿನ ಎಕ್ಸಾಲಾಜಿಕ್ ಸಲ್ಯೂಷನ್ಸ್ ಐ.ಟಿ ಕಂಪನಿ ವಿಫಲವಾಗಿದೆ ಎಂದು ಬೆಂಗಳೂರು ಕಂಪನಿಗಳ ನೋಂದಣಿಯ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.