ನಾಗಪುರ: ‘ದೇಶದಲ್ಲಿ ಜನರ ಮೂತ್ರ (ಯೂರಿನ್) ಸಂಗ್ರಹಿಸಿದರೆ, ವಿದೇಶದಿಂದ ಯೂರಿಯಾ ಆಮದು ಮಾಡಿಕೊಳ್ಳುವುದು ಕೊನೆಯಾಗಲಿದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಾಗಪುರ ಮಹಾನಗರ ಪಾಲಿಕೆ ಏರ್ಪಡಿಸಿದ್ದ ‘ಮೇಯರ್ ನಾವೀನ್ಯತೆ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು,‘ವಿಮಾನನಿಲ್ದಾಣಗಳಲ್ಲಿ ಮೂತ್ರ ಶೇಖರಿಸಲು ತಿಳಿಸಿದ್ದೆನು. ಮನುಷ್ಯರ ಮೂತ್ರದಲ್ಲಿ ಅಮೋನಿಯಂ ಸಲ್ಫೇಟ್ ಹಾಗೂ ಸಾರಜನಕ ಲಭ್ಯವಾಗುತ್ತದೆ. ಯೂರಿಯಾವನ್ನು ನಾವು ಈಗ ಆಮದು ಮಾಡುತ್ತಿದ್ದೇವೆ. ದೇಶದ ಎಲ್ಲ ಕಡೆಗಳಲ್ಲಿ ಮೂತ್ರ ಸಂಗ್ರಹಿಸಿದರೆ, ಆಮದು ಕೊನೆಗೊಳಿಸಬಹುದು. ಅಷ್ಟರ ಮಟ್ಟಿಗೆ ನಮ್ಮಲ್ಲಿ ಸಂಗ್ರಹವಿದ್ದು, ಯಾವುದೂ ವ್ಯರ್ಥವಾಗಬಾರದು’ ಎಂದು ತಿಳಿಸಿದರು.

‘ನನ್ನ ಬಳಿ ಅದ್ಭುತವಾದ ಆಲೋಚನೆಗಳಿವೆ, ಇತರೆ ವ್ಯಕ್ತಿಗಳು ಇದೇ ಕಾರಣದಿಂದ ನನಗೆ ಬೆಂಬಲ ನೀಡುತ್ತಿಲ್ಲ’ ಎಂದರು.

‘ಮನುಷ್ಯನ ಕೂದಲಿನಲ್ಲಿ ಅಮಿನೊ ಆ್ಯಸಿಡ್ ಬೇರ್ಪಡಿಸಿ, ಕೃಷಿಭೂಮಿಗೆ ಸೇರಿಸಿದರೆ, ಶೇಕಡಾ 25ರಷ್ಟು ಹೆಚ್ಚಿನ ಉತ್ಪಾದನೆ ಪಡೆಯಬಹುದು. ಇದಕ್ಕಾಗಿ ನಾಗಪುರದಲ್ಲಿ ಕಾರ್ಖಾನೆ ತೆರೆದಿದ್ದೆನು.ನನ್ನ ನಿರೀಕ್ಷೆಯಂತೆ ನಾಗಪುರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೂದಲು ಸಂಗ್ರಹವಾಗಿರಲಿಲ್ಲ, ನಂತರ ಪ್ರತಿ ತಿಂಗಳು ತಿರುಪತಿಯಿಂದ ಐದು ಟ್ರಕ್ ಕೂದಲು ಖರೀದಿಸಿದ್ದೆವು’ ಎಂದು ಕಾರ್ಯಕ್ರಮವೊಂದರಲ್ಲಿ ಸಚಿವ ಗಡ್ಕತಿ ಬಹಿರಂಗಪಡಿಸಿದ್ದರು.

ಇದನ್ನೂ ಓದಿ... ದೇಶದಲ್ಲೇ ಮೂತ್ರ ಸಂಗ್ರಹಿಸಿದರೆ ಯೂರಿಯಾ ಆಮದು ನಿಲ್ಲಿಸಬಹುದು: ನಿತಿನ್ ಗಡ್ಕರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.