ಚೆನ್ನೈ: ತಮಿಳುನಾಡಿನಲ್ಲಿ ತಮ್ಮದೆಯಾದ ಒಂದು ಟಿವಿ ಚಾನೆಲ್ ಆರಂಭಿಸಲು ಬಿಜೆಪಿ ಮುಂದಾಗಿದೆ.

ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಟಿವಿ ಚಾನೆಲ್‌ನ ಶೀರ್ಷಿಕೆಯನ್ನು ಶೀಘ್ರವಾಗಿ ಅನಾವರಣ ಮಾಡಲಾಗುತ್ತದೆ. ಅಲ್ವರ್‌ಪೇಟೆಯಲ್ಲಿ ಇದರ ಕಚೇರಿ ಇರಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ನೇತೃತ್ವದಲ್ಲಿ ಈ ಚಾನೆಲ್ ಕೆಲಸ ಮಾಡಲಿದ್ದು, ತನ್ನ ರಾಜಕೀಯ ಧ್ಯೇಯೋಧ್ದೇಶಗಳನ್ನು ಜನರ ಮನೆ ಮನೆಗೆ ತಲುಪಲು ಬಿಜೆಪಿ ಮುಂದಾಗಿದೆ.

ಬಿಜೆಪಿಯ ಈ ನಡೆ ತಮಿಳುನಾಡಿನ ಇತರೆ ರಾಜಕೀಯ ಪಕ್ಷಗಳಿಗೆ ಆಶ್ಚರ್ಯ ಮೂಡಿಸಿದೆ. ಈಗಾಗಲೇ ಕೇರಳದಲ್ಲಿ ಬಿಜೆಪಿ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ‘ಜನಂ’ ಟಿವಿ ಮಾದರಿಯಲ್ಲೇ ಬಹುತೇಕ ಅದೇ ಹೆಸರಿನಲ್ಲಿ ಈ ಚಾನೆಲ್ ಅಸ್ತಿತ್ವಕ್ಕೆ ಬರಲಿದೆ. ಇದೊಂದು ಸುದ್ದಿ ಹಾಗೂ ಇನ್ಪೋಟೇನ್‌ಮೆಂಟ್ ಚಾನೆಲ್ ಆಗಿರಲಿದೆ ಎನ್ನಲಾಗಿದೆ.

ಜನಂ ವಾಹಿನಿ ಆರ್‌ಎಸ್‌ಎಸ್ ಸಿದ್ದಾಂತಗಳನ್ನು ಮುನ್ನೆಲೆಗೆ ತರಲು ಹಾಗೂ ಶಬರಿಮಲೆ ಘಟನೆಯಲ್ಲಿ ಸುದ್ದಿ ಬಿತ್ತರಿಸುವಾಗ ಮುಂಚೂಣಿಯಲ್ಲಿತ್ತು.

ಗಣರಾಜ್ಯೋತ್ಸವ ಅವಹೇಳನ: ನಟಿ ರಚಿತಾ ರಾಮ್ ವಿರುದ್ಧ ಮದ್ದೂರಿನಲ್ಲಿ ದೂರು ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.