ಚೆನ್ನೈ: ಪೊಂಗಲ್ ಹಬ್ಬದ ಅಂಗವಾಗಿ ರಾಜ್ಯ ಎರಡು ಕೋಟಿ ಪಡಿತರ ಕಾರ್ಡುದಾರರಿಗೆ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಇರುವ ಶ್ರೀಲಂಕಾದ ತಮಿಳರಿಗೆ ಉಡುಗೊರೆ ವಿತರಿಸುವ ಕಾರ್ಯಕ್ರಮಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬುಧವಾರ ಚಾಲನೆ ನೀಡಿದರು.

ಈ ಉಡುಗೊರೆಯಲ್ಲಿ ಪ್ರತೀ ಕುಟುಂಬಕ್ಕೆ ₹1,000 ನಗದು, ಒಂದು ಕಬ್ಬಿನ ತುಂಡು ಹಾಗೂ ತಲಾ ಒಂದು ಕೆ.ಜಿ ಅಕ್ಕಿ ಹಾಗೂ ಸಕ್ಕರೆ ವಿತರಿಸಲಾಗುತ್ತಿದೆ.
.ತಮಿಳುನಾಡು ಜನರಿಗೆ ಸಿಹಿಸುದ್ದಿ: ಪೊಂಗಲ್ ಹಬ್ಬಕ್ಕೆ ನಗದು ಉಡುಗೊರೆ ಘೋಷಿಸಿದ ಸಿಎಂ.
ಇಲ್ಲಿನ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಉಡುಗೊರೆಗಳನ್ನು ವಿತರಿಸಿದ ಸ್ಟಾಲಿನ್, ಫಲಾನುಭವಿಗಳಿಗೆ ಉಚಿತವಾಗಿ ಧೋತಿ ಹಾಗೂ ಸೀರೆಯನ್ನೂ ನೀಡಿದರು.

2.19 ಕೋಟಿ ಪಡಿತರ ಕಾರ್ಡುದಾರರಿಗೆ ಹಾಗೂ ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಈ ಉಡುಗೊರೆ ವಿತರಿಸಲಾಗುತ್ತಿದೆ. ಸುಮಾರು ₹ 2,436.19 ಕೋಟಿ ವೆಚ್ಚದ ಕಾರ್ಯಕ್ರಮ ಇದಾಗಿದೆ.

ಇದೇ ವೇಳೆ ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೆ 1.77 ಕೋಟಿ ಧೋತಿ ಹಾಗೂ ಅಷ್ಟೇ ಸಂಖ್ಯೆ ಸೀರೆಗಳನ್ನು ವಿತರಿಸಲಾಗಿದೆ. ಇದರಿಂದ ಕೈಮಗ್ಗ ಹಾಗೂ ಪವರ್‌ಲೂಮ್ ವಲಯಕ್ಕೆ ಉದ್ಯೋಗ ಸೃಷ್ಟಿಯೂ ಆಗಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
.ಪೊಂಗಲ್ ಹಬ್ಬದಂದು ನನ್ನನ್ನು ಭೇಟಿಯಾಗುವುದು ಬೇಡ: ಸ್ಟಾಲಿನ್.
ಉಡುಗೊರೆ ವಿತರಣೆ ವೇಳೆ ಪಡಿತರ ಅಂಗಡಿಗಳಲ್ಲಿ ನೂಕುನುಗ್ಗಲು ತಡೆಯಲು, ಫಲಾನುಭವಿಗಳಿಗೆ ದಿನಾಂಕ ಹಾಗೂ ಸಮಯ ನಮೂದು ಮಾಡಿರುವ ಟೋಕನ್‌ಗಳನ್ನು ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.