ನವದೆಹಲಿ/ಬೆಂಗಳೂರು: ಮಕ್ಕಳ ಲೈಂಗಿಕ ಚಿತ್ರಗಳನ್ನು, ದೃಶ್ಯಗಳನ್ನು ಇಟ್ಟುಕೊಳ್ಳುವುದು ಕೂಡ ಪೋಕ್ಸೊ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಅಪರಾಧ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.

ಆ ಚಿತ್ರ, ದೃಶ್ಯಗಳನ್ನು ಬೇರೆಯವರಿಗೆ ರವಾನಿಸದೆ ಇದ್ದರೂ, ಅವುಗಳನ್ನು ಇಟ್ಟುಕೊಳ್ಳುವುದು ಅಪರಾಧವೆಂದೇ ಪರಿಗಣಿತವಾಗುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

‘ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವುದು ಬಹಳ ವ್ಯಾಪಕವಾಗಿದೆ, ಇದು ಜಗತ್ತಿನಾದ್ಯಂತ ವಿವಿಧ ಸಮುದಾಯಗಳನ್ನು ಪಿಡುಗಾಗಿ ಕಾಡುತ್ತಿದೆ, ಭಾರತದಲ್ಲಿ ಇದು ಗಂಭೀರ ಕಳವಳಕ್ಕೆ ಕಾರಣವಾಗಿದೆ’ ಎಂದು ಹೇಳಿರುವ ಕೋರ್ಟ್, ಈ ವಿಚಾರವಾಗಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವು ತಪ್ಪಾಗಿತ್ತು ಎಂದು ಹೇಳಿದೆ. ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ.

ಮಕ್ಕಳು ಇರುವ ಲೈಂಗಿಕ ಚಿತ್ರ, ದೃಶ್ಯಗಳನ್ನು ತನ್ನ ಮೊಬೈಲ್ ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡ ಆರೋಪದಡಿ ಎಸ್. ಹರೀಶ್ ಎನ್ನುವವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಜ. 11ರಂದು ರದ್ದುಗೊಳಿಸಿತ್ತು.

ಇಂತಹ ದೃಶ್ಯ, ಚಿತ್ರಗಳನ್ನು ಡೌನ್‌ಲೋಡ್ ಮಾಡಿ, ಅವುಗಳನ್ನು ಇರಿಸಿಕೊಂಡ ಮಾತ್ರಕ್ಕೆ ಅದು ಪೋಕ್ಸೊ ಹಾಗೂ ಮಾಹಿತಿ ತಂತ್ರಜ್ಞಾನ (ಐ.ಟಿ) ಕಾಯ್ದೆಗಳ ಅಡಿಯಲ್ಲಿ ಅಪರಾಧ ಕೃತ್ಯವಾಗುವುದಿಲ್ಲ ಎಂದು
ಹೇಳಿತ್ತು.

‘ಈ ಆದೇಶ ನೀಡುವ ಮೂಲಕ ಹೈಕೋರ್ಟ್ ಬಹಳ ತಪ್ಪು ಮಾಡಿದೆ ಎಂಬ ನಿರ್ಣಯಕ್ಕೆ ನಾವು ಬಂದಿದ್ದೇವೆ. ಈ ಆದೇಶವನ್ನು ಅಸಿಂಧುಗೊಳಿಸುವುದನ್ನು ಹೊರತುಪಡಿಸಿ
ದರೆ ನಮಗೆ ಬೇರೆ ಆಯ್ಕೆ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಅವರು ಇದ್ದ ವಿಭಾಗೀಯ ಪೀಠವು ತೀರ್ಪಿನಲ್ಲಿ ಹೇಳಿದೆ. ಯುವಕನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳು
ಮುಂದುವರಿಯಲಿವೆ.

ಅಪರಾಧಗಳ ಸ್ವರೂಪ ವಿವರಿಸಿದ ಕೋರ್ಟ್

ಪೋಕ್ಸೊ ಕಾಯ್ದೆಯ ಸೆಕ್ಷನ್ 15ರಲ್ಲಿ ಮೂರು ಬಗೆಯ ಅಪರಾಧಗಳನ್ನು ವಿವರಿಸಲಾಗಿದೆ. ಈ ಸೆಕ್ಷನ್ನಿನ ಉಪಸೆಕ್ಷನ್ನುಗಳಾದ 1, 2 ಮತ್ತು 3ರ ಅಡಿಯಲ್ಲಿ ವಿವರಿಸಿರುವ ಉದ್ದೇಶಗಳಿಗಾಗಿ ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ಹೊಂದಿರುವುದಕ್ಕೆ ಅಥವಾ ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ದಂಡ, ಶಿಕ್ಷೆ ವಿಧಿಸಲು ಅವಕಾಶ ಇದೆ. ಸೆಕ್ಷನ್ 15ರಲ್ಲಿ ಹೇಳಿರುವ ಮೂರು ಆಯಾಮಗಳನ್ನು ತೀರ್ಪಿನಲ್ಲಿ ವಿವರಿಸಲಾಗಿದೆ.

ಉಪ ಸೆಕ್ಷನ್ 1

‘ಮಕ್ಕಳ ಲೈಂಗಿಕ ಚಿತ್ರ, ದೃಶ್ಯ’ಗಳನ್ನು ಅಳಿಸಿಹಾಕಲು, ನಾಶಪಡಿಸಲು ಅಥವಾ ಯಾವುದೇ ವ್ಯಕ್ತಿಯು ಅಂಥವುಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಇಟ್ಟುಕೊಂಡಿರುವುದರ ಬಗ್ಗೆ ಸಂಬಂಧಪಟ್ಟ
ವರಿಗೆ ವರದಿ ಮಾಡುವಲ್ಲಿ ವಿಫಲರಾದಲ್ಲಿ ದಂಡ ವಿಧಿಸಬಹುದು.

ಪೋಕ್ಸೊ ಕಾಯ್ದೆಯ ಅಡಿಯಲ್ಲಿ, ಕೃತ್ಯವನ್ನು ಗಮನಿಸಿಯೇ ಉದ್ದೇಶವನ್ನು ತಿಳಿಯಬೇಕು ಎಂದು ಪೀಠ ಹೇಳಿದೆ. ‘ಅಂತಹ ದೃಶ್ಯ, ಚಿತ್ರಗಳನ್ನು ಸಂಗ್ರಹಿಸಿ ಇಟ್ಟುಕೊಂಡ ಬಗೆಯನ್ನು, ಯಾವ ಸಂದರ್ಭ ದಲ್ಲಿ ಅವುಗಳನ್ನು ಇಟ್ಟುಕೊಳ್ಳಲಾಗಿತ್ತು, ಯಾವ ಕಾರಣಕ್ಕಾಗಿ ಅವುಗಳನ್ನು ಅಳಿಸಿಹಾಕಿರಲಿಲ್ಲ, ಅವು ಗಳ ಬಗ್ಗೆ ವರದಿ ಮಾಡಿರಲಿಲ್ಲ ಎಂಬುದನ್ನು ಗಮನಿಸಿ ತೀರ್ಮಾನಿಸಬೇಕು. ಈ ಉಪ ಸೆಕ್ಷನ್ನಿನ ಅಡಿಯಲ್ಲಿ, ಕೃತ್ಯವು ಅಪರಾಧ ಎಂದು ಪರಿಗಣಿತವಾಗಲು, ಆರೋಪಿಯ ಉದ್ದೇಶವು ಅಂತಹ ದೃಶ್ಯ, ಚಿತ್ರಗಳನ್ನು ಹಂಚಿಕೊಳ್ಳುವುದಾಗಿತ್ತು ಎಂಬುದನ್ನು ಸಂದರ್ಭವು ಸೂಚಿಸುತ್ತಿರಬೇಕು’ ಎಂದು ಪೀಠ ವಿವರಿಸಿದೆ.

ಉಪ ಸೆಕ್ಷನ್ 2

ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ನೀಡುವ ಅಥವಾ ಅಂಥವುಗಳ ಬಗ್ಗೆ ವರದಿ ಮಾಡುವ ಉದ್ದೇಶ ಹೊರತುಪಡಿಸಿ, ಅವುಗಳನ್ನು ಹಂಚಲು, ಪ್ರದರ್ಶಿಸಲು ಯಾವುದೇ ರೂಪದಲ್ಲಿ ಇಟ್ಟುಕೊಳ್ಳುವುದು, ಹೊಂದಿರುವುದು ಅಪರಾಧ. ಹಾಗೆ ಮಾಡಿದವರಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ, ದಂಡ ಅಥವಾ ಅವೆರಡನ್ನೂ ವಿಧಿಸಬಹುದು.

ಈ ಉಪ ಸೆಕ್ಷನ್ನಿನ ಅಡಿಯಲ್ಲಿ ಕೃತ್ಯವು ಅಪರಾಧ ಎಂದು ಪರಿಗಣಿತವಾಗಲು, ಅಂತಹ ದೃಶ್ಯ, ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಷ್ಟೇ ಅಲ್ಲದೆ, ಇನ್ನೂ ಹೆಚ್ಚಿನ ಸಂಗತಿಗಳು ಇರಬೇಕು. ಅಂದರೆ, ಅಂಥವುಗಳನ್ನು ಹಂಚಿಕೊಂಡಿರಬೇಕು, ಅಂಥವುಗಳನ್ನು ಪ್ರದರ್ಶಿಸಿರಬೇಕು ಎಂದು ಪೀಠವು ವಿವರಿಸಿದೆ. ಲೈಂಗಿಕ ಚಿತ್ರ, ದೃಶ್ಯಗಳನ್ನು ಯಾವ ರೀತಿಯಲ್ಲಿ ಇಟ್ಟುಕೊಳ್ಳಲಾಗಿತ್ತು ಎಂಬುದನ್ನು ಗಮನಿಸಿ, ಕ್ರಿಮಿನಲ್ ಉದ್ದೇಶವನ್ನು ತಿಳಿಯಬೇಕು ಎಂದು ಪೀಠ ಹೇಳಿದೆ.

ಉಪ ಸೆಕ್ಷನ್ 3

ವಾಣಿಜ್ಯ ಉದ್ದೇಶಕ್ಕಾಗಿ ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ಇಟ್ಟುಕೊಳ್ಳುವುದನ್ನು ಇದು ಅಪರಾಧ ಕೃತ್ಯವೆಂದು ಪರಿಗಣಿಸುತ್ತದೆ. ಅದಕ್ಕೆ ದಂಡವನ್ನು ಹಾಗೂ ಮೊದಲ ಬಾರಿಯ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.

ಈ ಸೆಕ್ಷನ್ನಿನ ಅಡಿಯನ್ನು ಅಪರಾಧವನ್ನು ಸಾಬೀತು ಮಾಡಲು, ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ಆರೋಪಿಯು ಹೊಂದಿರುವುದಷ್ಟೇ ಅಲ್ಲದೆ, ಇನ್ನಷ್ಟು ಪೂರಕವಾದ ಸಂಗತಿಗಳು ಇರಬೇಕಾಗುತ್ತದೆ. ಯಾವುದೇ ಬಗೆಯ ಪ್ರಯೋಜನ, ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಅವುಗಳನ್ನು ಇರಿಸಿಕೊಳ್ಳಲಾಗಿತ್ತು ಎಂಬುದನ್ನು ಸೂಚಿಸುವಂತಹ ಸಂಗತಿಗಳು ಇರಬೇಕಾಗುತ್ತದೆ ಎಂದು ಪೀಠವು ಹೇಳಿದೆ.

ಮೂರೂ ಬಗೆಯ ಅಪರಾಧಗಳು ಒಟ್ಟಿಗೇ ಆಗಿರುವುದಿಲ್ಲ. ಮೂರೂ ಅಪರಾಧಗಳು ಒಂದಕ್ಕಿಂತ ಒಂದು ಭಿನ್ನ ಎಂದು ಪೀಠವು ಹೇಳಿದೆ. ಮಕ್ಕಳ ಲೈಂಗಿಕ ದೃಶ್ಯ, ಚಿತ್ರಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ ಪ್ರಕರಣಗಳನ್ನು ಪರಿಶೀಲಿಸುವಾಗ ಪೊಲೀಸರು ಹಾಗೂ ನ್ಯಾಯಾಲಯಗಳು, ಪೋಕ್ಸೊ ಕಾಯ್ದೆಯ ಸೆಕ್ಷನ್ 15ರ ಯಾವುದೇ ಒಂದು ಉಪಸೆಕ್ಷನ್ ಅನ್ವಯವಾಗುವುದಿಲ್ಲ ಎಂಬುದನ್ನು ಕಂಡುಕೊಂಡರೆ, ಅಲ್ಲಿ ಅಪರಾಧವೇ ನಡೆದಿಲ್ಲ ಎಂದು ತೀರ್ಮಾನಿಸಬಾರದು. ಅದರ ಬದಲಿಗೆ, ಒಂದು ಉಪ ಸೆಕ್ಷನ್ ಅನ್ವಯ ಆಗುವುದಿಲ್ಲ ಎಂದಾದರೆ, ಇನ್ನೊಂದು ಉಪ ಸೆಕ್ಷನ್ ಅನ್ವಯ ಆಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಪೀಠ ವಿವರಿಸಿದೆ.

ಇಂಟರ್ನೆಟ್‌ನಲ್ಲಿ ವೀಕ್ಷಣೆ ಅಪರಾಧವೇ?

ಮಕ್ಕಳ ಲೈಂಗಿಕ ದೃಶ್ಯ, ಚಿತ್ರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳದೆ, ಅವುಗಳನ್ನು ಇಂಟರ್ನೆಟ್ ಮೂಲಕ ವೀಕ್ಷಿಸುವುದು, ಹಂಚಿಕೊಳ್ಳುವುದು ಅಥವಾ ಪ್ರದರ್ಶಿಸುವುದು ಅಪರಾಧ ಆಗುತ್ತದೆಯೇ ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಉತ್ತರ ನೀಡಿದೆ.

ಇಂಟರ್ನೆಟ್ ಮೂಲಕ ವೀಕ್ಷಿಸುವಾಗ ಆರೋಪಿಗೆ ಅಂತಹ ವಸ್ತು–ವಿಷಯಗಳ ಮೇಲೆ ‘ನಿರಂತರವಾದ ನಿಯಂತ್ರಣ ಇತ್ತು’ ಎಂದಾದರೆ, ಅದು ಕೂಡ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಹೇಳಿರುವ ‘ಹೊಂದಿರುವಿಕೆ’ಯೇ ಆಗುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ. ಮಕ್ಕಳ ಲೈಂಗಿಕ ಚಿತ್ರ, ದೃಶ್ಯಗಳನ್ನು ಅಳಿಸದೆ, ಸಂಬಂಧಪಟ್ಟವರಿಗೆ ತಿಳಿಸದೆ ‘ಹೊಂದಿರುವುದು’ ಅಪರಾಧ ಎಂದು ಪೋಕ್ಸೊ ಕಾಯ್ದೆ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.