ಲಂಡನ್ : ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹೀದರ್ ನೈಟ್ ಅವರ ಕಪ್ಪು ಮೆತ್ತಿದ ಮುಖದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ ಮತ್ತು 1,300 ಡಾಲರ್ (₹1.08 ಲಕ್ಷ) ದಂಡ ಹಾಕಲಾಗಿದೆ.

ಆಟಗಾರ್ತಿಯ ನಡೆಯನ್ನು ‘ಜನಾಂಗೀಯ ತಾರತಮ್ಯ’ ಎಂದು ಪರಿಗಣಿಸಿರುವ ಕ್ರಿಕೆಟ್ ಶಿಸ್ತು ಆಯೋಗ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೈಟ್ ತನ್ನನ್ನು ಕ್ಷಮಿಸುವಂತೆ ಕೋರಿದ್ದಾರೆ.

2012ರಲ್ಲಿ ಕ್ರೀಡಾ ವಿಷಯದ ಛದ್ಮವೇಷ ಪಾರ್ಟಿಯಲ್ಲಿ ಆ ಚಿತ್ರ ತೆಗೆಯಲಾಗಿದೆ. ಯಾವುದೇ ಜನಾಂಗೀಯ ಅಥವಾ ತಾರತಮ್ಯದ ಉದ್ದೇಶ ಇರಲಿಲ್ಲ ಎಂಬುದನ್ನು ನೈಟ್ ಅವರು ಶಿಸ್ತು ಆಯೋಗದ ಅಧಿಕಾರಿ ಓ’ ಗಾರ್ಮನ್ ಅವರಿಗೆ ಮನವರಿಕೆ ಮಾಡಿದರು.

ನಾನು 21 ವರ್ಷವಳಾಗಿದ್ದಾಗ ಮಾಡಿದ ತಪ್ಪಿಗೆ ನಿಜವಾಗಿಯೂ ವಿಷಾದಿಸುತ್ತೇನೆ. ನನ್ನಿಂದ ತಪ್ಪಾಗಿದೆ ಮತ್ತು ಬಹಳ ಹಿಂದೆಯೇ ಪಶ್ಚಾತ್ತಾಪ ಪಟ್ಟಿದ್ದೇನೆ ಎಂದಿದ್ದಾರೆ.

ಕಪ್ಪು ಮುಖದಲ್ಲಿರವ ನೈಟ್ ಅವರ ಚಿತ್ರವನ್ನು ಬೇರೊಬ್ಬರ ಫೇಸ್‌ಬುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ನೈಟ್ ಅವರು ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.