ಮುಂಬೈ: ಇಂದು ಬೆಳಿಗ್ಗೆ ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರವೊಂದು ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಶೌಚಾಲಯದ ಟಿಶ್ಯೂ ಪೇಪರ್‌ನಲ್ಲಿ ‘ಮುಂಬೈಗೆ ಬಂದರೆ ನೀವೆಲ್ಲ ಸಾಯುತ್ತಿರಿ‘ ಎಂದು ಬರೆಯಲಾಗಿತ್ತು. ವಿಮಾನದ ಲ್ಯಾಂಡಿಂಗ್ ವೇಳೆಗೂ ಮುನ್ನ ಇದು ಬೆಳಕಿಗೆ ಬಂದಿದೆ.

ಈ ವಿಷಯ ವಿಮಾನದ ಸಿಬ್ಬಂದಿಯ ಗಮನಕ್ಕೆ ಬಂದ ತಕ್ಷಣ ವಿಮಾನವನ್ನು ತಪಾಸಣೆ ಮಾಡಲಾಯಿತು. ಆದರೆ ಯಾವುದೇ ಸಂದೇಹಾತ್ಮಕ ವಸ್ತುಗಳು ಕಂಡು ಬಂದಿಲ್ಲ. ಈ ಘಟನೆ ಬಗ್ಗೆ ಅಪರಿಚಿತರ ವಿರುದ್ಧ ಐಪಿಸಿ 503 ಕಲಂ ಅಡಿ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಏರ್‌ಪೋರ್ಟ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮುಂಬೈ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
.ರಾಜ್ಯಸಭೆಗೆ ಟಿಕೆಟ್: ಇಬ್ಬಗೆ ನೀತಿಯಿಂದ ಟ್ರೋಲ್ ಆದ ಪತ್ರಕರ್ತೆ ಸಾಗರಿಕಾ ಘೋಷ್.ತುಂಬಾ ತಿನ್ನುತ್ತೇನೆ, ನಿಯಂತ್ರಿಸಬೇಕಿದೆ: ಆಸ್ಪತ್ರೆಯಿಂದ ಬಂದ ಮಿಥುನ್ ಚಕ್ರವರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.