ತಿರುನಲ್ವೇಲಿ: ಆಕರ್ಷಕ ಪ್ಲೇ ಹೋಮ್ಗಳಿಗೆ ಮಕ್ಕಳನ್ನು ಸೇರಿಸಲು ಬಯಸುವ ಜನರ ನಡುವೆ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ತಮ್ಮ ಮಗಳನ್ನು ಅಂಗನವಾಡಿಗೆ ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2009ರ ಬ್ಯಾಚ್ನ, ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಶಿಲ್ಪಾ, ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿ. ‘ನಿಮ್ಮ ಮಗಳನ್ನು ಅಂಗನವಾಡಿಗೆ ಏಕೆ ಸೇರಿಸಿದ್ದೀರಿ’ ಎಂಬ ಪ್ರಶ್ನೆಗೆ ‘ಅಂಗನವಾಡಿಗಳಿಗೆ ಉತ್ತೇಜನ ನೀಡುವವರು ನಾವೇ (ಸರ್ಕಾರ) ಅಲ್ಲವೇ’ ಎಂದು ಅವರು ತಕ್ಷಣ ಪ್ರತಿಕ್ರಿಯಿಸಿದರು.

‘ನಮ್ಮ ಅಂಗನವಾಡಿಗಳು ಎಲ್ಲ ರೀತಿಯ ಸೌಲಭ್ಯಗಳನ್ನೂ ಹೊಂದಿವೆ. ನನ್ನ ಮಗಳನ್ನು ಸೇರಿಸಿರುವ ಅಂಗನವಾಡಿ ನಮ್ಮ ಮನೆಗೆ ಹತ್ತಿರದಲ್ಲೇ ಇದೆ. ಅವಳು ಎಲ್ಲರೊಂದಿಗೆ ಆಡಿ ನಲಿಯಲು ಅನುಕೂಲಕರವಾಗಿದೆ’ ಎಂದರು.

‘ತಿರನಲ್ವೇಲಿ ಜಿಲ್ಲೆಯಲ್ಲಿ ಸಾವಿರಾರು ಅಂಗನವಾಡಿಗಳಿವೆ. ಅಲ್ಲಿರುವ ಪ್ರತಿಯೊಬ್ಬರೂ ಉತ್ತಮ ಶಿಕ್ಷಕರೇ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.