ಕನೌಜ್, (ಉತ್ತರಪ್ರದೇಶ): ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಲಂಚದ ರೂಪದಲ್ಲಿ ಆಲೂಗಡ್ಡೆ ನೀಡಬೇಕೆಂದು ವ್ಯಾಪಾರಿಯೊಬ್ಬರಿಗೆ ಬೇಡಿಕೆ ಇರಿಸಿದ್ದ ಇಲ್ಲಿನ ಸಬ್ ಇನ್‌ಸ್ಪೆಕ್ಟರ್‌ವೊಬ್ಬರನ್ನು ಅಮಾನತು ಮಾಡಲಾಗಿದೆ.

ಸೌರಿಖ್ ಪೊಲೀಸ್ ಠಾಣೆಯ ಸಬ್– ಇನ್‌ಸ್ಪೆಕ್ಟರ್ ರಾಮಕೃಪಾಲ್ ಅವರು ಆಲೂಗಡ್ಡೆಗೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ, ಕನೌಜ್‌ನ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ಅವರು ಈ ಕ್ರಮ ಕೈಗೊಂಡಿದ್ದಾರೆ.

’ವ್ಯಕ್ತಿಯು ತನಗೆ ಎರಡು ಕಿಲೋ ಆಲೂಗಡ್ಡೆಯನ್ನು ಮಾತ್ರ ಕೊಡಲು ಸಾಧ್ಯ ಎಂದು ಹೇಳುವುದು ಮತ್ತು ಅದಕ್ಕೆ ಅಸಮಾಧಾನ ವ್ಯಕ್ತಪಡಿಸುವ ರಾಮ್‌ಕೃಪಾಲ್, ಐದು ಕಿಲೋ ನೀಡಲು ಒಪ್ಪಂದವಾಗಿತ್ತು ಎಂದು ಹೇಳುವುದು ಆಡಿಯೊದಲ್ಲಿದೆ.

ವ್ಯಾಪಾರ ಕಡಿಮೆಯಾಗಿದ್ದರಿಂದ ಎರಡು ಕಿಲೋ ಮಾತ್ರ ನೀಡಲು ಸಾಧ್ಯ ಎಂದು ವ್ಯಕ್ತಿಯು ಪುನರುಚ್ಚರಿಸಿದಾಗ, ಬಾಕಿ ಮೂರು ಕಿಲೋ ಆಲೂಗಡ್ಡೆಯನ್ನು ನಂತರದಲ್ಲಿ ನೀಡುವಂತೆ ರಾಮ್‌ಕೃಪಾಲ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.