ಚೆನ್ನೈ(ಪಿಟಿಐ): ನಗರದಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಸಮುದ್ರದ ಉಪ್ಪುನೀರನ್ನು ಶುದ್ಧೀಕರಿಸಿ ಬಳಸುವ ಪ್ರಕ್ರಿಯೆಗೆ ತಮಿಳುನಾಡು ಸರ್ಕಾರ ಚಾಲನೆ ನೀಡಿದೆ.

ಗುರುವಾರ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕಾಂಚೀಪುರಂ ಜಿಲ್ಲೆಯ ಸಮೀಪ, ₹1,259 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಉಪ್ಪುನೀರು ಶುದ್ಧೀಕರಣ ಘಟಕಕ್ಕೆ ಅಡಿಗಲ್ಲು ಹಾಕಿದರು. ‘ಕಾಂಚೀಪುರಂ ಜಿಲ್ಲೆಯ ಪೆರೂರು ಬಳಿ ₹6,078.40 ಕೋಟಿ ವೆಚ್ಚದಲ್ಲಿ400 ಎಂಎಲ್‌ಡಿ(ದಿನಕ್ಕೆ 40 ಕೋಟಿ ಲೀ.)ಶುದ್ಧೀಕರಣ ಘಟಕದ ಕಾಮಗಾರಿಗೆ ಚುರುಕು ನೀಡಲಾಗಿದೆ.

ನೆಮ್ಮೇಲಿಯಲ್ಲಿ ದಿನಕ್ಕೆ 15 ಕೋಟಿ ಲೀ. ಶುದ್ಧೀಕರಣ ಘಟಕ 2021 ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.‘₹1,259 ಕೋಟಿಯಲ್ಲಿ, ₹700 ಕೋಟಿಯನ್ನು ಜರ್ಮನ್ ಸಂಸ್ಥೆ ಕೆಎಫ್‌ಡಬ್ಲ್ಯೂನಿಂದ ಸಾಲ ಪಡೆದುಕೊಳ್ಳಲಾಗುವುದು. ಉಳಿದ ಮೊತ್ತವನ್ನು ಕೇಂದ್ರ ಅಮೃತ್ ಯೋಜನೆಯಡಿ ಸಬ್ಸಿಡಿ ರೂಪದಲ್ಲಿ ಪಡೆಯಲಾಗುವುದು ಎಂದು ಸರ್ಕಾರ ತಿಳಿಸಿದೆ. ಪೆರೂರು ಘಟಕಕ್ಕೆ ₹4,267 ಕೋಟಿ ಹಣವನ್ನು ಜಪಾನ್ ಅಂತರರಾಷ್ಟ್ರೀಯ ಸಹಕಾರಿ ಸಂಸ್ಥೆಯಿಂದ(ಜೈಕಾ)ಪಡೆಯಲಾಗುವುದು, ಉಳಿದ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ’ ಎಂದು ಪಳನಿಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.