ನವದೆಹಲಿ: ಜನಗಣತಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಜನಗಣತಿ ಮೂಲಕವೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸ್ಥಾಪಿಸಲು ಸಾಧ್ಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

'ಆರ್ಥಿಕ ಪ್ರಕ್ಷುಬ್ಧತೆ ಮತ್ತು ರಾಜಕೀಯ ಬದಲಾವಣೆ ನಡುವೆಯೂ ಶ್ರೀಲಂಕಾ ಇತ್ತೀಚೆಗೆ ಜನಸಂಖ್ಯೆ ಮತ್ತು ವಸತಿ ಗಣತಿ ಘೋಷಿಸಿದೆ. ಆದರೆ ಭಾರತದಲ್ಲಿ ಇನ್ನೂ ವಿಳಂಬ ನೀತಿಯನ್ನು ಅನುಸರಿಸುತ್ತಿದೆ' ಎಂದು ರಮೇಶ್ ಕುಟುಕಿದ್ದಾರೆ.
.ಮಾಜಿ ಸಿಎಂ ಮೋದಿ ಗೌರವಾರ್ಥ ಗುಜರಾತ್ ಸರ್ಕಾರದಿಂದ ಪ್ರತಿ ವರ್ಷ 'ವಿಕಾಸ ಸಪ್ತಾಹ'.ಅಮೆರಿಕ ಚುನಾವಣೆ: ಮಕ್ಕಳಿಲ್ಲದ ಮಹಿಳೆ ಎಂಬ ಆರೋಪಗಳಿಗೆ ಕಮಲಾ ಹ್ಯಾರಿಸ್ ತಿರುಗೇಟು.
'2021ರಲ್ಲಿಯೇ ದಶವಾರ್ಷಿಕ ಜನಗಣತಿ ನಡೆಯಬೇಕಿತ್ತು, ಆದರೆ ಇದುವರೆಗೂ ನಡೆದಿಲ್ಲ ಮತ್ತು ಜಾತಿಗಣತಿ ನಡೆಸುವ ಯಾವುದೇ ಸುಳಿವು ಸಿಗುತ್ತಿಲ್ಲ. 10 ಕೋಟಿಗೂ ಅಧಿಕ ಭಾರತೀಯರು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013 ಅಥವಾ ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ' ಎಂದು ರಮೇಶ್ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ 1951ರಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿದೆ. ಆದರೆ ಉಳಿದ ಹಿಂದುಳಿದ ವರ್ಗ ಮತ್ತು ಇತರೆ ವರ್ಗಗಳ ಸಂಬಂಧ ಜನಗತಿ ನಡೆದಿಲ್ಲ ಎಂದು ರಮೇಶ್ ತಿಳಿಸಿದ್ದಾರೆ
.ಉತ್ತರ ಪ್ರದೇಶ: ಶೂ ಹಾಕಿಕೊಂಡು ದೇಗುಲ ಪ್ರವೇಶಿಸಿದ ಅಧಿಕಾರಿ ಅಮಾನತು .ಹಮಾಸ್ ದಾಳಿಗೆ ವರ್ಷ: ಬೈರೂತ್ ಮೇಲೆ ಇಸ್ರೇಲ್ ದಾಳಿ, ಹಿಜ್ಬುಲ್ಲಾ ಪ್ರತಿದಾಳಿ.
ಜನಗಣತಿಯಲ್ಲಿ ಜಾತಿ ಸಂಬಂಧಿತ ವಿಷಯಗಳನ್ನು ಸೇರಿಸುವ ಬಗ್ಗೆ ಕಾಂಗ್ರೆಸ್ ಸೇರಿದಂತೆ ಇತರೆ ಎಲ್ಲಾ ರಾಜಕೀಯ ಪಕ್ಷಗಳ ಒತ್ತಾಯಿಸಿದರೂ ಈವರೆಗೂ ಉತ್ತರವೇ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.ಯುವ ದಸರೆಗೆ ವರ್ಣರಂಜಿತ ಚಾಲನೆ: ಶ್ರೇಯಾ ಘೋಷಾಲ್ ಹಾಡಿಗೆ ಯುವಜನರು ಫಿದಾ.ಕಾಲೇಜಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ: ಮಾಹಿತಿ ಕೋರಿ ಮೈಕ್ರೋಸಾಫ್ಟ್ಗೆ ಪತ್ರ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.