ನವದೆಹಲಿ: ‘ಆತಿಥ್ಯ ಉದ್ಯಮದಲ್ಲಿರುವ ಮಹಿಳಾ ಉದ್ಯೋಗಿಗಳು ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಹೆಚ್ಚು ಕೆಲಸ ಮತ್ತು ಜೀವನದ ಒತ್ತಡವನ್ನು ಎದುರಿಸುತ್ತಾರೆ’ ಎಂದು ಹೊಸ ಅಧ್ಯಯನವೊಂದು ಹೇಳಿದೆ.

‘ಒತ್ತಡದ ಜತೆಗೇ ಸಹೋದ್ಯೋಗಿಗಳ ಪೂರ್ವಗ್ರಹಿಕೆಯ ಕಲ್ಪನೆಗಳು ಮತ್ತು ಮೇಲಧಿಕಾರಿಗಳ ವರ್ತನೆಗಳು ಮಹಿಳಾ ಉದ್ಯೋಗಿಗಳಿಗೆ ಪ್ರಮುಖ ಅಡಚಣೆಯಾಗಿದೆ’ ಎಂದೂ ಅಧ್ಯಯನ ತಿಳಿಸಿದೆ.

‘ಭಾರತದ ಆತಿಥ್ಯ ಉದ್ಯಮದಲ್ಲಿ ಲಿಂಗ ಸಮಾನತೆಯ ಸ್ಥಿತಿಯ ಮೌಲ್ಯಮಾಪನ’ ಎಂಬ ಶೀರ್ಷಿಕೆಯಡಿ ಭಾರತೀಯ ಮಹಿಳಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಡಬ್ಲ್ಯುಐಸಿಸಿಐ) ಮತ್ತು ಇಂಡಿಯನ್ ಸ್ಕೂಲ್ ಆಫ್ ಹಾಸ್ಪಿಟಾಲಿಟಿ (ಐಎಸ್ಎಚ್) ಅಧ್ಯಯನವನ್ನು ನಡೆಸಿದೆ. ಈ ಅಧ್ಯಯನಕ್ಕಾಗಿ ವಿವಿಧ ಸಂಸ್ಥೆಗಳಲ್ಲಿ ಹಿರಿಯ ಮತ್ತು ಮಧ್ಯಮಮಟ್ಟದ ಹುದ್ದೆಗಳಲ್ಲಿ ಕಾರ್ಯನಿರ್ವಾಹಕರ 23 ಸಂದರ್ಶನಗಳನ್ನು ನಡೆಸಲಾಗಿದೆ.

‘ನಾವು ಪಿತೃಪ್ರಧಾನಸಮಾಜದಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಮಹಿಳೆಯರು ಕೆಲಸದಲ್ಲಿ ಉದ್ಯೋಗಿಗಳಾಗಿ ಮತ್ತು ಮನೆಯಲ್ಲಿ ಮಕ್ಕಳು ಹಾಗೂ ವಯಸ್ಸಾದದವರಿಗೆ ಪ್ರಾಥಮಿಕ ಆರೈಕೆ ಮಾಡುವವರಾಗಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ಮಹಿಳೆಯರು ಆತಿಥ್ಯ ಉದ್ಯಮದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಮಹಿಳೆಯರಿಗೆ ಪ್ರತಿಭೆಯಷ್ಟೇ ಇದ್ದರೆ ಸಾಲದು, ಅವರಿಗೆ ಸಾಂಸ್ಥಿಕ ಮತ್ತು ಕುಟಂಬದ ಬೆಂಬಲವೂ ಅತ್ಯಗತ್ಯವಾಗಿದೆ ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ’ ಎಂದು ಇಂಡಿಯನ್ ಸ್ಕೂಲ್ ಆಫ್ ಹಾಸ್ಪಿಟಾಲಿಟಿಯ ಸಂಶೋಧನೆ ಮತ್ತು ನಿರ್ವಹಣಾ ಅಧ್ಯಯನಗಳ ಡೀನ್ ಪಾಯಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.