ನವದೆಹಲಿ: ರಾಜಕೀಯ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷೆ ಹೊಂದಿರುವ ಮಹಿಳೆಯರನ್ನು ಬೆಂಬಲಿಸಲು ಹಾಗೂ ಪ್ರೋತ್ಸಾಹಿಸಲುವ ಸಲುವಾಗಿ ಮಹಿಳಾ ಮೀಸಲಾತಿ ಕಾಯ್ದೆಯು ಕಾಂಗ್ರೆಸ್ಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ (ಎಐಎಂಸಿ) 40ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಜೋಡೊ ಯಾತ್ರೆ ಮತ್ತು ಭಾರತ ಜೋಡೊ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಮಹಿಳೆಯರನ್ನು ಭೇಟಿಯಾಗಿ ಅವರ ಸಂಕಷ್ಟಗಳನ್ನು ಆಲಿಸಿದ್ದೇನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆರನ್ನೂ ಭೇಟಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
.10 ವರ್ಷ ಪ್ರಜಾಸತ್ತಾತ್ಮಕ ಸಂಸ್ಥೆಗಳ ನಾಶಕ್ಕೆ ಸಂಘಟಿತ ಪ್ರಯತ್ನ ನಡೆದಿದೆ: ಖರ್ಗೆ.ಗುಜರಾತ್ | ಪಾದರಕ್ಷೆ ತೆಗೆಯುವಂತೆ ಹೇಳಿದ ವೈದ್ಯರ ಮೇಲೆ ಹಲ್ಲೆ: ಮೂವರ ಬಂಧನ.
‘ಸಮಾಜದಲ್ಲಿ ಬದಲಾವಣೆಗಳನ್ನು ತರಲು ಹಾಗೂ ದೂರದೃಷ್ಟಿ ಹೊಂದಿದ್ದ ಮಹಿಳೆಯರ ಉತ್ಸಾಹ, ಪರಿಶ್ರಮ ಮತ್ತು ಬದ್ಧತೆಯು ಗಮನಾರ್ಹ. ಅನ್ಯಾಯದ ವಿರುದ್ಧ ಸಿಡಿದೆದ್ದ ಹಾಗೂ ಅತ್ಯಂತ ನಿರ್ಭೀತ ಧ್ವನಿಯಾಗಿ ಅನೇಕ ಮಹಿಳೆಯರು ಗುರುತಿಸಿಕೊಂಡಿದ್ದರು‘ ಎಂದು ರಾಹುಲ್ ಶ್ಲಾಘಿಸಿದ್ದಾರೆ.

’ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದುವರಿದಿದ್ದು, ಅವರನ್ನು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತಗೊಳ್ಳಿಸಲು ಅವರಿಗೆ ಸಿಗುವ ಅವಕಾಶಗಳನ್ನು ನಿರಾಕರಿಸುವಂತಿಲ್ಲ’ ಎಂದು ರಾಹುಲ್ ಹೇಳಿದ್ದಾರೆ.
.ಭದ್ರತಾ ಲೋಪ: ಸಿಎಂ ಸಿದ್ದರಾಮಯ್ಯಗೆ ಶಾಲು ಹೊದಿಸಲು ವೇದಿಕೆಗೆ ಜಿಗಿದ ಯುವಕ.ಟೇಕಾಫ್ ಆಗದ ಹೆಲಿಕಾಪ್ಟರ್; ರಸ್ತೆ ಮೂಲಕ ಜೆಮ್ಶೆಡ್ಪುರಕ್ಕೆ ತೆರಳಿದ ಮೋದಿ.
ಕಾಂಗ್ರೆಸ್ ಪಕ್ಷದ ಕಟ್ಟುವಲ್ಲಿ ಹಾಗೂ ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿಯುತ್ತಿರುವ ಮಹಿಳೆರನ್ನು ಅಭಿನಂದಿಸಿದ ರಾಹುಲ್, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಮಹಿಳಾ ಮೀಸಲಾತಿ ಕಾಯ್ದೆಯು ಅವಕಾಶ ಕಲ್ಪಿಸಿದೆ ಎಂದರು.

‘ದೇಶದ ಮಹಿಳಾ ಶಕ್ತಿಯು ಸ್ವಾತಂತ್ರ್ಯ ಹೋರಾಟದಿಂದ ಬಾಹ್ಯಾಕಾಶ ಹಾರಾಟದವರೆಗೆ ರಾಷ್ಟ್ರ ನಿರ್ಮಾಣಕ್ಕೆ ಸಮಾನವಾಗಿ ಕೊಡುಗೆ ನೀಡಿದೆ. ಮಹಿಳೆಯರ ಅಭದ್ರತೆ, ಹಣದುಬ್ಬರ, ನಿರುದ್ಯೋಗ, ಸಾಮಾಜಿಕ ಶೋಷಣೆ, ಅಸಮಾನತೆಯ ವಿರುದ್ಧದ ಹೋರಾಟ ನಡೆಸುವುದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ ಜವಾಬ್ದಾರಿಯಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ನಲ್ಲಿ ತಿಳಿಸಿದ್ದಾರೆ.
.ಇನ್ನೆರಡು ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಅರವಿಂದ ಕೇಜ್ರಿವಾಲ್.ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಇತಿಹಾಸ, ಮಹತ್ವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.