ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಮನ್ವಯ ಸಮಿತಿಗೆ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ರೈತರ ಸಂಘಟಿತ ಹೋರಾಟದಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.

ಇಲ್ಲಿನ ಗುರುದ್ವಾರ ರಾಕಬ್‌ಗಂಜ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಯಾದವ್ ಅವರ ರಾಜೀನಾಮೆ ಪತ್ರವನ್ನು ಎಸ್‌ಕೆಎಂ ಬಹಿರಂಗಗೊಳಿಸಿದೆ.

ಕಳೆದ ವರ್ಷ ರೈತರ ಚಳವಳಿಯ ನೇತೃತ್ವ ವಹಿಸಿದ್ದ ಸುಮಾರು 40 ರೈತ ಸಂಘಗಳ ಸಂಘಟನೆ ಎಸ್‌ಕೆಎಂನ ಸಮನ್ವಯ ಸಮಿತಿಯಲ್ಲಿ ಇನ್ನು ಮುಂದೆ ತಾವು ಇರುವುದಿಲ್ಲ ಎಂದು ಪತ್ರದಲ್ಲಿ ಯಾದವ್ ಹೇಳಿದ್ದಾರೆ.

‘ಸಮನ್ವಯ ಸಮಿತಿ ಸದಸ್ಯನ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ರೈತ ವಿರೋಧಿ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಎಲ್ಲಾ ಚಳುವಳಿಗಳು ಮತ್ತು ವಿಪಕ್ಷ ರಾಜಕೀಯ ಪಕ್ಷಗಳ ಶಕ್ತಿಗಳು ಸೇರಿಕೊಳ್ಳುವುದು ಮುಖ್ಯವಾಗಿದೆ. ಇದಕ್ಕಾಗಿ ರೈತ ಚಳವಳಿಯ ಹೊರತಾಗಿ ಇತರೆ ಚಳವಳಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಸಮಿತಿಯ ಜವಾಬ್ದಾರಿಯೊಂದಿಗೆ ನನಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುವುದಿಲ್ಲ’ ಎಂದು ಯಾದವ್ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.