ಕೋಲ್ಕತ್ತ: ಮಾಯಾ ವಿದ್ಯೆ ಪ್ರದರ್ಶಿಸಲು ಹೋಗಿ ಜಾದೂಗಾರರೊಬ್ಬರು ಹೂಗ್ಲಿ ನದಿ ಪಾಲಾಗಿರುವ ಘಟನೆ ಇಲ್ಲಿನ ಮಿಲೇನಿಯಂ ಉದ್ಯಾನದ ಬಳಿ ಭಾನುವಾರ ನಡೆದಿದೆ.

ಚಂಚಲ್ ಲಾಹಿರಿ(40) ಎಂಬುವರೇ ಕೊಚ್ಚಿ ಹೋದವರು. ‘ಹ್ಯಾರಿ ಹೌದಿನಿ’ ಎಂಬ ಪಾರಾಗುವ ವಿದ್ಯೆ ಪ್ರದರ್ಶಿಸುತ್ತೇನೆಂದು ಸರಪಳಿಗಳಿಂದ ಬಂಧಿಸಿಕೊಂಡು ನದಿಗೆ ಹಾರಿದ್ದರು. ಆದರೆ, ಹೌರಾ ಸೇತುವೆಯ 28ನೇ ಕಂಬದ ಬಳಿ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಪಡೆ ಮತ್ತು ಮುಳುಗು ತಜ್ಞರೊಂದಿಗೆ ಕಾರ್ಯಾಚರಣೆ ನಡೆಸಿದರೂ ಚಂಚಲ್ ಅವರು ಪತ್ತೆಯಾಗಿಲ್ಲ. ಯಾವುದೇ ಸುರಕ್ಷತಾ ಕ್ರಮಗಳನ್ನು ಅವರು ಅನುಸರಿಸಿರಲಿಲ್ಲ. ಜಾದೂಗಾಗಿ ಕ್ರೇನ್ ಕೂಡ ಬಳಸಲಾಗಿತ್ತು. ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2013ರಲ್ಲಿ ಚಂಚಲ್ ಅವರು ಇದೇ ಜಾಗದಲ್ಲಿ‘ಹ್ಯಾರಿ ಹೌದಿನಿ’ ಜಾದೂ ಪ್ರದರ್ಶಿಸಿ ಖ್ಯಾತಿ ಗಳಿಸಿದ್ದರು.ಹ್ಯಾರಿ ಹೌದಿನಿ ಅಮೆರಿಕದ ಜಾದೂಗಾರರಾಗಿದ್ದು, ತಮ್ಮ ಕೈಗಳಿಗೆ ಸರಪಳಿಗಳಿಂದ ಬಂಧಿಸಿಕೊಂಡು ನೀರಿಗೆ ಹಾರುತ್ತಿದ್ದಲ್ಲದೆ, ಪಾರಾಗಿ ಬರುತ್ತಿದ್ದರು. ಇದು ‘ಹ್ಯಾರಿ ಹೌದಿನಿ’ ವಿದ್ಯೆ ಎಂದೇ ಹೆಸರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.