ಅಥಣಿ (ಬೆಳಗಾವಿ ಜಿಲ್ಲೆ):‘ಕಾಂಗ್ರೆಸ್ ಖಾಲಿ ಮಾಡುತ್ತೇನೆ’ ಎಂಬ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮಿಹೆಬ್ಬಾಳ್ಕರ್ಆಕಾಶ ನೋಡಿಕೊಂಡು ಕೈಮುಗಿದು‘ಅವರು ದೇವರು, ದೊಡ್ಡವರು’ ಎಂದಷ್ಟೇ ಪ್ರತಿಕ್ರಿಯಿಸಿದರು.

ತಾಲ್ಲೂಕಿನ ನದಿಇಂಗಳಗಾಂವದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಭಸ್ಮಾಸುರ ಎನ್ನುವವನಿದ್ದ. ಆತ ಕೈ ಇಟ್ಟಲ್ಲೆಲ್ಲಾ ಸುಟ್ಟು ಹೋಗುತ್ತಿತ್ತಂತೆ. ಕೊನೆಗೆ ಆತ ತನ್ನ ತಲೆ ಮೇಲೆಯೇ ಕೈ ಇಟ್ಟುಕೊಂಡನಂತೆ’ ಎಂದು ಉದಾಹರಿಸಿದರು. ಆದರೆ, ಯಾರಿಗೆ ಆ ಮಾತು ಅನ್ವಯಿಸುತ್ತದೆ ಎನ್ನುವುದನ್ನು ಖಚಿತವಾಗಿ ಹೇಳಲು ನಿರಾಕರಿಸಿದರು.

‘ಜಿಲ್ಲೆಯಲ್ಲಿ ಹಿಂದಿನಿಂದಲೂ ಹೊಂದಾಣಿಕೆ ರಾಜಕಾರಣ ನಡೆದುಕೊಂಡು ಬಂದಿದೆ. ಇದು ಕೊನೆಯಾಗಬೇಕು. ಈ ನಿಟ್ಟಿನಲ್ಲಿ ಮತದಾರರು ಬುದ್ಧಿವಂತರಾಗಬೇಕು. ಸಹಕಾರ ಕ್ಷೇತ್ರದ ರಾಜಕಾರಣ ಹಾಗೂ ಪಕ್ಷದ ರಾಜಕಾರಣವನ್ನು ಬೇರೆ ಬೇರೆಯೇ ಮಾಡುತ್ತಾರೆ. ಇದೆಲ್ಲಾ ಹೊಂದಾಣಿಕೆಯಷ್ಟೇ. ಆ ಬಗ್ಗೆ ಹೆಚ್ಚಾಗಿ ಹೇಳುವುದಕ್ಕೆ ಇದು ಸಮಯವಲ್ಲ’ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ಬಿಜೆಪಿಗೆ ಬರುವಂತೆ ಸವದಿ ಅಣ್ಣ ನನಗೆ ರಾಜಕೀಯವಾಗಿ ಆಹ್ವಾನ ನೀಡಿದ್ದರು. ನಾನೂ ರಾಜಕೀಯವಾಗಿ ಹಾಗೂ ನಯವಾಗಿಯೇ ಆ ಆಹ್ವಾನವನ್ನು ತಿರಸ್ಕರಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.