ಬೆಂಗಳೂರು:ನಾನು ಕ್ಷೇತ್ರದಲ್ಲಿಯೇ ಇದ್ದೇನೆ, ಎಲ್ಲಿಯೂ ಹೋಗಿಲ್ಲ. ನನ್ನ ಫೋನ್ ಇಪ್ಪತ್ತನಾಲ್ಕು ಗಂಟೆಯೂ ಆನ್ ಆಗಿಯೇ ಇದೆ. ನಮ್ಮನ್ನು ವಾಪಸ್ ಕರೆತಂದರು ಅನ್ನೋದಕ್ಕೆ ನಾವೇನು ಹಾಲು ಕುಡಿಯುವ ಮಕ್ಕಳಾ..?

ಹೀಗೆ ಮಾಧ್ಯಮಗಳ ವಿರುದ್ಧ ಗರಂ ಆದವರುರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಮಾಡಲು ಬಂದ ಅವರು, ಬಿಜೆಪಿಯ ಯಾವನಾಯಕರೂ ನಮ್ಮನ್ನ ಸಂಪರ್ಕಿಸಿಲ್ಲ. 2 ಲಕ್ಷ ಮತದಾರರಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ನಮ್ಮ ಮರ್ಯಾದೆ ತೆಗೆಯೋ ಕೆಲಸ ಯಾಕ್ ಮಾಡ್ತಿದ್ದೀರಿ..? ಎಂದು ಕಿಡಿಕಾರಿದರು.

ನಾಗೇಶ್ಡಿಮ್ಯಾಂಡ್‌ಗೆ ಒಪ್ಪಿಗೆ

ಶಾಸಕ ಎಚ್. ನಾಗೇಶ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ. ಹಾಗಾಗಿಅವರು ತಕ್ಷಣವೇ ಎಲ್ಲಿದ್ದರೂ ಹೊರಟು ಬರಬೇಕು. ನಿಮ್ಮ ಡಿಮ್ಯಾಂಡ್ ನಾವು ಪೂರೈಸುತ್ತೇವೆ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.

ಮಂತ್ರಿ ಮಾಡಲು ಆಗದಿದ್ದರೂ ಮಂಡಳಿ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ನಮ್ಮ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ನೀವು ಬಿಜೆಪಿಗೆ ಹೋಗಿದ್ರೂ ವಾಪಸ್ ಬರಬೇಕು. ನೀವು ಪಕ್ಷೇತರ ಅಭ್ಯರ್ಥಿಯಲ್ಲ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ.ಜಾತ್ಯಾತೀತ ಮತಗಳನ್ನ ಪಡೆದು ನೀವು ಗೆದ್ದಿದ್ದೀರ ಎಂದು ಮುಳಬಾಗಿಲು ಕ್ಷೇತ್ರದ ಶಾಸಕ ನಾಗೇಶ್‌ಗೆ ಸಂಸದ ಕೆ.ಹೆಚ್.ಮುನಿಯಪ್ಪ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.