ಕಾರವಾರ: ಜಿಲ್ಲೆಯಲ್ಲಿ 142 ಕಿಲೋಮೀಟರ್ಗಳಷ್ಟು ಕಡಲತೀರವಿದ್ದು, ಕಡಲ್ಕೊರೆತದ ಸಮಸ್ಯೆ ಐದಾರು ವರ್ಷಗಳಿಂದ ನಿಧಾನವಾಗಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.ಭಟ್ಕಳ ಮತ್ತು ಹೊನ್ನಾವರ ತಾಲ್ಲೂಕಿನಲ್ಲಿ ಜನರನ್ನು ಹೆಚ್ಚು ಕಾಡುತ್ತಿದೆ.

ಹೊನ್ನಾವರ ತಾಲ್ಲೂಕಿನ ಪಾವಿನಕುರ್ವದಲ್ಲಿಇದೇ ಮೊದಲ ಬಾರಿ ಈ ವರ್ಷ ಮಳೆಗಾಲದಲ್ಲಿ ಎರಡು ಮನೆಗಳು ಅಲೆಗಳ ಹೊಡೆತಕ್ಕೆ ಕುಸಿದವು. ಉಳಿದಂತೆ,ತೊಪ್ಪಲಕೇರಿ, ಹೆಗಡೆ ಹಿತ್ಲು, ಕರ್ಕಿಕೋಡಿ ಭಾಗದಲ್ಲಿ ಒಂದು ಕಿಲೋಮೀಟರ್ನಷ್ಟು ಕಡಲತೀರ ಸಮುದ್ರ ಪಾಲಾಗಿದೆ.

ಇದನ್ನೂ ಓದಿ:ಒಳನೋಟ| ಪ್ರತಿವರ್ಷ ಕಡಲಿಗೆ ಕಲ್ಲು..!

‘ಒಂದೆಡೆಯಿಂದ ಗೇರುಸೊಪ್ಪ ಭಾಗದಿಂದ ಶರಾವತಿ ನದಿ, ಮತ್ತೊಂದೆಡೆ ಬಡಗಣಿ ಹೊಳೆಯ ನೀರು ಭೂ ಪ್ರದೇಶವನ್ನು ಮುಳುಗಿಸುತ್ತಿದೆ. ಈ ಎಲ್ಲ ಊರುಗಳುತಗ್ಗು ಪ್ರದೇಶಗಳು. ನಮಗೊಂದು ಪರಿಹಾರ ಕಲ್ಪಿಸಿಕೊಡಿ ಎಂದು ಹತ್ತಾರು ವರ್ಷಗಳಿಂದ ಕಂಡಕಂಡವರನ್ನು ಕೇಳುತ್ತಿದ್ದೇವೆ. ಕಳೆದ ವರ್ಷ ಪ್ರಧಾನಿಗೂ ಪತ್ರ ಬರೆದಿದ್ದೇವೆ. ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆಯನ್ನೂ ಮಾಡಿದ್ದೇವೆ. ಆದರೂಪ್ರಯೋಜನವಾಗಲಿಲ್ಲ’ ಎಂಬುದು ಹೆಗಡೆಹಿತ್ಲು ನಿವಾಸಿಹರಿಶ್ಚಂದ್ರ ಗಣಪತಿ ನಾಯಕ ಅವರ ಬೇಸರ.

ಸಮೀಪದ ಭಟ್ಕಳ ತಾಲ್ಲೂಕಿನಲ್ಲೂ ಅಲೆಗಳ ಅಬ್ಬರ ಆಗಾಗ ಜೋರಾಗುತ್ತದೆ. ಮಣ್ಣನ್ನು ಕಬಳಿಸದಂತೆ ತಡೆಯಲು ಕಡಲ ದಂಡೆಯುದ್ದಕ್ಕೂ ಕಲ್ಲು, ಮರಳಿನ ಚೀಲಗಳನ್ನು ಇಡಲಾಗಿದೆ.ಹೆಬಳೆ ಗ್ರಾಮದ ಹೊನ್ನೆಗದ್ದೆ, ಜಾಲಿ ಕೋಡಿ, ಬೆಳಕೆ, ಮಾವಿನಕುರ್ವ ಗ್ರಾಮದ ತಲಗೋಡಿನಲ್ಲಿ ತೊಂದರೆಯಿದೆ. ಆಗಸ್ಟ್ ತಿಂಗಳ ಮಳೆಗೆ ಸಮುದ್ರದ ನೀರು ಮೀನುಗಾರರ ಶೆಡ್ಗಳನ್ನು, ತೆಂಗಿನಮರಗಳನ್ನು ಕಬಳಿಸಿತ್ತು. ಅಲ್ಲಿನ ಕಚ್ಚಾ ರಸ್ತೆಯನ್ನೂ ನಾಮಾವಶೇಷ ಮಾಡಿತ್ತು.

ಇದನ್ನೂ ಓದಿ:ಒಳನೋಟ| ಕಡಲ ಒಡಲು ಸೇರಿದ ಕೋಟ್ಯಂತರ ಅನುದಾನ

ಅಂಕೋಲಾ ತಾಲ್ಲೂಕಿನ ಗಾಬಿತ ಕೇಣಿ, ಕಾರವಾರ ತಾಲ್ಲೂಕಿನದೇವಭಾಗ ಸುತ್ತಮುತ್ತ ಒಂದು ವರ್ಷದಿಂದ ಕಡಲ್ಕೊರೆತವಾಗುತ್ತಿದೆ.

ತಜ್ಞರು ಏನು ಹೇಳುತ್ತಾರೆ?:‘ನಾವು ಕಡಲತೀರವನ್ನು ಬಳಸುತ್ತಿರುವ ವಿಧಾನ ಬದಲಾಗಿದೆ. ಅಲೆತಡೆಗೋಡೆಗಳಂತಹ ಕಾಮಗಾರಿಗಳುನದಿ ನೀರು, ಅಲೆಗಳ ನೈಸರ್ಗಿಕ ಚಲನೆಗೆ ಅಡ್ಡಿ ಮಾಡುತ್ತವೆ. ಇದರಿಂದಕಡಲ್ಕೊರೆತ ಹೆಚ್ಚಾಗುತ್ತಿದೆ’ ಎಂಬುದುಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನಕೇಂದ್ರದಮುಖ್ಯಸ್ಥ ಡಾ.ಜಗನ್ನಾಥ ರಾಥೋಡ್ ಅವರ ಅಭಿಪ್ರಾಯ.

ಇದನ್ನೂ ಓದಿ:ಒಳನೋಟ| ಅಲೆಗಳ ಉಬ್ಬರ ತಡೆದರೆ ಕಡಲ್ಕೊರೆತ ನಿವಾರಣೆ

‘ಸಮುದ್ರದಲ್ಲಿ ಹಮ್ಮಿಕೊಳ್ಳುವ ಯಾವುದೇ ಅಭಿವೃದ್ಧಿ ಕಾಮಗಾರಿಗೂ ಮೊದಲು ಅದರ ಪರಿಣಾಮವನ್ನುಅಧ್ಯಯನ ಮಾಡುತ್ತಿಲ್ಲ. ಎಗ್ಗಿಲ್ಲದೇ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ. ಇವುಗಳಿಂದ ಅಲೆಗಳದಿಕ್ಕು ಬದಲಾಗಿ ಅವುಗಳಶಕ್ತಿ ಬೇರೆ ಕಡೆಗೆ ವರ್ಗಾವಣೆಯಾಗುತ್ತದೆ’ ಎಂದು ಅವರು ಹೇಳುತ್ತಾರೆ.

₹ 73 ಕೋಟಿ ನಷ್ಟ

‘ಈ ವರ್ಷ ಕಡಲ್ಕೊರೆತದಿಂದ ₹ 73 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹೊನ್ನಾವರ ಮತ್ತು ಕಾರವಾರದ ದೇವಬಾಗದಲ್ಲಿ7.7 ಕಿಲೋಮೀಟರ್ ಉದ್ದದ ಕಡಲತೀರಕ್ಕೆ ಹಾನಿಯಾಗಿದೆ’ ಎಂದು ಬಂದರು ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಟಿ.ಎಸ್. ರಾಥೋಡ್ ಮಾಹಿತಿ ನೀಡಿದ್ದಾರೆ.

ಮೀನುಗಾರಿಕೆ ಇಲಾಖೆಯ 121 ಕಿಲೋಮೀಟರ್ ರಸ್ತೆಯಿದ್ದು, ₹3 ಕೋಟಿ ನಷ್ಟವಾದ ಬಗ್ಗೆ ವರದಿ ನೀಡಲಾಗಿದೆ ಎಂದುಇಲಾಖೆಯ ಉಪ ನಿರ್ದೇಶಕ ಪಿ. ನಾಗರಾಜು ತಿಳಿಸಿದ್ದಾರೆ.

ಹೊನ್ನಾವರದ ಸುತ್ತಮುತ್ತಕಡಲ್ಕೊರೆತ ತಡೆಯುವ ಕಾಮಗಾರಿಗೆ ₹ 8 ಕೋಟಿ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಅನುದಾನ ಸಿಗುವ ವಿಶ್ವಾಸವಿದೆ.
-ದಿನಕರ ಶೆಟ್ಟಿ,ಕುಮಟಾ– ಹೊನ್ನಾವರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.