ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆಯಲು ಕ್ರೀಡಾ ಕೋಟಾದಡಿ 40 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದಾರೆ.

2024–25ನೇ ಸಾಲಿನಲ್ಲಿ 170 ಸೀಟುಗಳು ಕ್ರೀಡಾ ಕೋಟಾಕ್ಕೆ ಮೀಸಲಾಗಿದ್ದವು. ಆದರೆ, ಇನ್ನೂ 130 ಸೀಟುಗಳು ಖಾಲಿ ಉಳಿದಿದ್ದು, ಅವುಗಳನ್ನು ಸಾಮಾನ್ಯ ಕೋಟಾದಲ್ಲಿ ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಹೊಸ ಕ್ರೀಡಾ ನೀತಿ ಅನ್ವಯ ಕ್ರೀಡಾ ಕೋಟಾದಲ್ಲಿ ಪ್ರವೇಶ ಬಯಸುವವರು 10ರಿಂದ 12ನೇ ತರಗತಿ ಮಧ್ಯೆ ಎರಡು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು. ಆದರೆ, 2022ರಲ್ಲಿ ಕ್ರೀಡಾಕೂಟಗಳು ನಡೆದಿರಲಿಲ್ಲ. ಬಹುತೇಕ ವಿದ್ಯಾರ್ಥಿಗಳು 10 ಮತ್ತು 12ನೆಯ ತರಗತಿಯಲ್ಲಿ ಓದಿಗೆ ಗಮನಕೊಡುವ ಕಾರಣ ಕ್ರೀಡಾಕೂಟದಲ್ಲಿ ಭಾಗಹಿಸುವುದಿಲ್ಲ. ಹಾಗಾಗಿ, ಬಹುತೇಕ ವಿದ್ಯಾರ್ಥಿಗಳು ಎರಡು ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.

ಮೊದಲು 26 ವಿದ್ಯಾರ್ಥಿಗಳಷ್ಟೇ ಕ್ರೀಡಾ ಕೋಟಾಕ್ಕೆ ಆಯ್ಕೆಯಾಗಿದ್ದರು. ನಿಯಮ ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ನಂತರ ಕ್ರೀಡಾ ಇಲಾಖೆ ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದು, ಮತ್ತೆ 14 ವಿದ್ಯಾರ್ಥಿಗಳು ಅವಕಾಶ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕ್ರೀಡಾ ಕೋಟಾದ ಅಡಿ ಪ್ರವೇಶ ಬಯಿಸಿ ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.