ರಾಜರಾಜೇಶ್ವರಿನಗರ: ’ಬಿಜೆಪಿ ಮುಖಂಡರ ಪ್ರಚೋದನೆಯಿಂದ ನನ್ನ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ. ಈ ಮೂಲಕ ನನ್ನ ಆತ್ಮಸ್ಥೈರ್ಯ ಕುಗ್ಗಿಸಬಹುದು ಎಂದು ಭಾವಿಸಿದರೆ ಅದು ಅವರು ಮಾಡುವ ದೊಡ್ಡ ಪ್ರಮಾದ‘ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್.ಹೇಳಿದರು.

ಮಲ್ಲತ್ತಹಳ್ಳಿ, ಎನ್ಜಿಇಎಫ್ ಬಡಾವಣೆ, ಜ್ಞಾನಜ್ಯೋತಿ ಬಡಾವಣೆ, ಸರ್ಕಾರಿ ಮುದ್ರಣಾಲಯ ಬಡಾವಣೆಯಲ್ಲಿ ಮತಯಾಚಿಸಿ ಮಾತನಾಡಿದರು.

’ಕ್ಷೇತ್ರದ ಮತದಾರರು ಬುದ್ಧಿವಂತರಾಗಿದ್ದು ಬಿಜೆಪಿಯ ದಬ್ಬಾಳಿಕೆ, ದೌರ್ಜನ್ಯ, ಸುಳ್ಳು ಕೇಸು ಹಾಕುವಂತಹ ನೀಚ ರಾಜಕೀಯವನ್ನು ನೋಡುತ್ತಿದ್ದಾರೆ. ಕ್ಷೇತ್ರ ನೆಮ್ಮದಿಯಿಂದ ಇರಲು ನಿಮ್ಮ ಮಗಳಿಗೆ ಆಶೀರ್ವಾದ ಮಾಡಬೇಕು‘ ಎಂದು ಮನವಿ ಮಾಡಿದರು.

ಕಾರ್ಯಕರ್ತರ ಸಭೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದರು. ’ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆ ಮನೆಗೆ ತಿಳಿಸಬೇಕು‘ ಎಂದು ಹೇಳಿದರು.

’ಬಿಜೆಪಿಯವರು ಎಷ್ಟೇ ಅಕ್ರಮ, ದೌರ್ಜನ್ಯ ನಡೆಸಿ ಚುನಾವಣೆ ನಡೆಸಿದರೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ‘ ಎಂದರು. ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.