ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಬಿಡುವುದಿಲ್ಲ ಎಂದುಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಹುಬ್ಬಳ್ಳಿ ಪತ್ರಿಕಾ ಭವನ 'ಸ್ವರ್ಣ ಭವನ'ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬ ಕೂಗು ಕೇಳಿ ಬರುತ್ತಿದೆ. ನೀರಾವರಿ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಕೆಲವು ವಿಷಯದಲ್ಲಿ ಹಿಂದೆ ಇರಬಹುದು. ಅದನ್ನು ಸರಿಪಡಿಸಲು ನಂಜುಂಡಪ್ಪ ವರದಿ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇಡೀ ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ' ಎಂದರು.

ಪತ್ರಿಕೋದ್ಯಮ ಉದ್ಯಮವಾಗಿ, ಲಾಭದ ಹಿಂದೆ ಹೋದಾಗ ತತ್ವ, ಸಿದ್ಧಾಂತಗಳಲ್ಲಿ ರಾಜಿಯಾಗಬೇಕಾಗುತ್ತದೆ. ಪರಿಣತರು ನಿಸ್ವಾರ್ಥ ಸೇವೆ ಸಲ್ಲಿಸುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬರುತ್ತಿದ್ದ ಕಾಲ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪತ್ರಿಕೋದ್ಯಮ ಕಾರ್ಪೋರೆಟ್ ಸಂಸ್ಥೆಯಾಗಿ ಬದಲಾಗಿದೆ. ಹೀಗಾದಾಗ ಬ್ಯಾಲೆನ್ಸ್ ಶೀಟ್ ನೋಡಬೇಕಾಗುತ್ತದೆ. ಅದು ಸರಿ ಇರಬೇಕೆಂದರೆ ಲಾಭದ ಹಿಂದೆ ಹೋಗಬೇಕಾಗುತ್ತದೆ ಎಂದರು.

ಪತ್ರಕರ್ತರು ಸಮಾಜಮುಖಿಯಾಗಿರಬೇಕು, ಸಮಾಜವನ್ನು ಸರ್ಕಾರವನ್ನು ಎಚ್ಚರಸುವ ಕೆಲಸ ಮಾಡಬೇಕು ಎಂದರು.

ಕೆಟ್ಟ ಭಾಷೆ ಬಳಸಿದರೆ ಮಾತ್ರ ರಾಜ್ಯಮಟ್ಟದ ಸುದ್ದಿ: ಜಗದೀಶ ಶೆಟ್ಟರ್
'ಕೆಟ್ಟ ಭಾಷೆ ಬಳಸಿ ಮಾತನಾಡಿದರೆ ಮಾತ್ರ ಅದು ರಾಜ್ಯಮಟ್ಟದ ಸುದ್ದಿಯಾಗುತ್ತದೆ. ಸದನದಲ್ಲಿ ಒಳ್ಳೆಯ ವಿಷಯದ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಸಿದರೂ, ಅದು ಚಿಕ್ಕದಾಗಿ ಬರುತ್ತದೆ' ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

'ಖಾಸಗಿ ಸುದ್ದಿ ವಾಹಿನಿಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಆ್ಯಂಕರ್‌ಗಳು ರಾಜಕಾರಣಿಗಳ ಮಧ್ಯೆ ಜಗಳ ತಂದಿಟ್ಟು ಸುಮ್ಮನೆ ಕೂರುತ್ತಾರೆ. ಹೀಗಾದಾಗ ಮುಖ್ಯ ವಿಷಯದ ಬಗ್ಗೆ ಚರ್ಚೆ ನಡೆಯುವುದಿಲ್ಲ. ಸ್ಪರ್ಧೆ ಆರೋಗ್ಯಕರ ಇಲ್ಲದಿದ್ದರೆ ವ್ಯವಸ್ಥೆಗೆ ಧಕ್ಕೆಯಾಗುತ್ತದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.