ಮೈಸೂರು: ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ನಂತರ ಚಾಮುಂಡೇಶ್ವರಿ, ಹಾಸನಾಂಬೆ ಸೇರಿದಂತೆ ಹಿಂದೂ ದೇವತೆಗಳ ಮೇಲೆ ನಂಬಿಕೆ ಬಂದಿದೆ. ಹೀಗಾಗಿ ವಿಜಯಪುರ ವಿಚಾರದಲ್ಲಿ ಹಿಂದೂಗಳ ಪರ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡ ಪ್ರತಾಪ ಸಿಂಹ ಹೇಳಿದರು.

ಮಂಗಳವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ' ವಿಜಯಪುರದಲ್ಲಿ ರೈತರಿಗೆ ಸೇರಿದ ಜಮೀನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ.ಈ ವಕ್ಫ್ ಎಂದರೆ ಏನು? ಇವರಿಗೆ ಜಮೀನು ಬಳುವಳಿ ಆಗಿ ಕೊಟ್ಟಿದ್ದು ಯಾರು? ಇದೇನು ಜಿನ್ನಾ ಕೊಟ್ಟ ಭೂಮಿಯೇ? ' ಎಂದು ಪ್ರಶ್ನಿಸಿದರು.

ಕೇವಲ ವಿಜಯಪುರ ಮಾತ್ರವಲ್ಲ ಅಲ್ಲ. ಹುಣಸೂರಿನ ಗಣೇಶ ದೇವಸ್ಥಾನ, ಚಿಕ್ಕಮಗಳೂರಿನಲ್ಲಿ ಖಾಸಗಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಿ ಕಬಳಿಸುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿನ 1.25 ಲಕ್ಷ ಎಕರೆ ಜಮೀನು ತಮಗೆ ಸೇರಿದ್ದು ಎಂದು ವಕ್ಫ್ ಮಂಡಳಿ ವಾದಿಸುತ್ತಿದೆ. ಆದರೆ ಯಾವ ಮುಸಲ್ಮಾನರಿಗೂ ಕೃಷಿಗೆ ಜಮೀನು ಬಿಟ್ಟುಕೊಟ್ಟಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ದಂದೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ವಕ್ಫ್ ಕಾಯ್ದೆ ಅನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

'ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಬಿಜೆಪಿಯ ಜನಪ್ರಿಯ ನೇತಾರ. ವಕ್ಫ್ ವಿರುದ್ದ ಮೊದಲು ಧ್ವನಿ ಎತ್ತಿದ್ದು ಅವರೇ. ವಿಜಯಪುರದಲ್ಲಿ ರೈತರ ಅಹವಾಲು ಆಲಿಸಲಿರುವ ಬಿಜೆಪಿ ತಂಡದಲ್ಲಿ ಕಣ್ತಿಪ್ಪಿನಿಂದ ಅವರ ಹೆಸರಿ ಬಿಟ್ಟು ಹೋಗಿದ್ದು, ಸರಿಪಡಿಸಲಾಗಿದೆ. ಅವರ ನೇತೃತ್ವದಲ್ಲಿ ನವೆಂಬರ್ 3-4 ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
.ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್: BJP ತಂಡಕ್ಕೆ ಯತ್ನಾಳ, ಜಿಗಜಿಣಗಿ ಸೇರ್ಪಡೆ!.ವಕ್ಫ್ ಹೆಸರು ತೆಗೆಯಲು ಗಡುವು: ಯತ್ನಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.