ದಶಕಗಳ ಕಾಲ ವೃತ್ತಿ ರಂಗಭೂಮಿಯ ಕಾಯಕ ಮಾಡಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಹಾಸ್ಯ, ಅಭಿನಯ, ಹರಿತ ಸಂಭಾಷಣೆ ಅವರ ವೈಶಿಷ್ಟ್ಯ. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/ga1ok0A7rR
ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರು ವಿಧಿವಶರಾದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಥಾವಸ್ತುವೇ ಪ್ರಮುಖವಾಗಿರುವ ಅವರ ನಾಟಕಗಳು ಜನಮಾನಸದಲ್ಲಿ ಸದಾ ಸ್ಮರಣೀಯವಾಗಿವೆ.ಹಿರಣ್ಣಯ್ಯ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ರಾಜ್ಯದ ಸರ್ಕಾರಗಳ, ರಾಜಕಾರಣಿಗಳ ಆಡಳಿತ ವೈಖರಿಗಳನ್ನು ತಮ್ಮ ಹಾಸ್ಯ, ವ್ಯಂಗ್ಯ ಗಳಿಂದ ಕೂಡಿದ ಮಾತುಗಳಿಂದ ಚುಚ್ಚಿ ಎಬ್ಬಿಸುತ್ತಿದ್ದ "ಲಂಚಾವತಾರ" ಖ್ಯಾತಿಯ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲವೆಂದು ಕೇಳಿ ಮನಸ್ಸು ಖಾಲಿಯೆನಿಸಿದೆ. ಒಂದು ರೀತಿ ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದ ಮಾಸ್ಟರ್ ಹಿರಣ್ಣಯನವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. pic.twitter.com/iCNaa1N8vx
— Chowkidar Sureshkumar (@nimmasuresh) May 2, 2019