ರಾಮನಗರ: ‘ಅಂತರರಾಷ್ಟ್ರೀಯ ಭೂಗತ ಜಗತ್ತಿನಿಂದ ಬೆದರಿಕೆ ಇರುವ ಕಾರಣ ಭದ್ರತೆಗಾಗಿ ಏಜೆನ್ಸಿ ಮೂಲಕ ಸಿಬ್ಬಂದಿ ಹಾಗೂ ಗನ್‌ಗಳನ್ನು ಇಟ್ಟುಕೊಂಡಿದ್ದೇನೆ. ಅಕ್ರಮವಾಗಿ ಯಾವುದೇ ಶಸ್ತ್ರಾಸ್ತ್ರ ಸಂಗ್ರಹಿಸಿ ಇಟ್ಟುಕೊಂಡಿಲ್ಲ’ ಎಂದು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಹೇಳಿದರು.

‘ಆಯುಧ ಪೂಜೆಯ ದಿನ ಮೈಸೂರಿನ ಮನೆಯಲ್ಲಿ ನನ್ನ ಭದ್ರತಾ ಸಿಬ್ಬಂದಿಯ ಗನ್‌ಗಳನ್ನು ಒಂದೆಡೆ ಇಟ್ಟು ಪೂಜೆ ನೆರವೇರಿಸಿದ್ದೆವು. ಆ ಫೋಟೊ ವೈರಲ್ ಆದ ಕಾರಣ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ನನಗೆ ಭದ್ರತೆ ನೀಡಿದ್ದ ಏಜೆನ್ಸಿಯು ಬಂದೂಕುಗಳ ಪರವಾನಗಿಯನ್ನು ನವೀಕರಿಸಿಕೊಳ್ಳದ ಕಾರಣ ತೊಂದರೆ ಆಗಿತ್ತು. ಆದರೆ ಇದನ್ನೇ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ತಮ್ಮ ವಿರುದ್ಧ ಸುದ್ದಿ ಬಿತ್ತರಿಸಿ ತೇಜೋವಧೆ ಮಾಡಿದ ಎರಡು ಸುದ್ದಿ ವಾಹಿನಿಗಳ ವಿರುದ್ಧ ನೂರು ಕೋಟಿ ರೂಪಾಯಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿಯೂ ಅವರು ಹೇಳಿದರು.

ಸದ್ಯ ರಾಜ್ಯದ ವಿವಿಧೆಡೆ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದು, ನಮ್ಮ ಸಂಸ್ಥೆಗೆ ವಾರ್ಷಿಕ 100-150 ಕೋಟಿಯಷ್ಟು ಆದಾಯವಿದೆ. ಅದಕ್ಕೆ ಪ್ರತಿಯಾಗಿ ನಾನು, ನನ್ನ ಪತ್ನಿ 35 ಕೋಟಿಯಷ್ಟು ಆದಾಯ ತೆರಿಗೆ ಪಾವತಿಸುತ್ತಿದ್ದೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.