ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು ‘ದೀರ್ಘಾಯು ಭಾರತ ಉಪಕ್ರಮ’ ಯೋಜನೆಯನ್ನು ಘೋಷಿಸಿದೆ.

ಈ ಯೋಜನೆಯಡಿ ಮಾನವನ ದೀರ್ಘಾವಧಿ ಆರೋಗ್ಯವನ್ನು ವೃದ್ಧಿಸುವುದು ಮತ್ತು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸವಾಲುಗಳನ್ನು ಬಗೆಹರಿಸುವ ಸಂಬಂಧ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುವುದು. ಈ ಮೂಲಕ ಭಾರತೀಯರ ಆರೋಗ್ಯಪೂರ್ಣ ದೀರ್ಘಾಯು ಆಗಿಸುವ ನಿಟ್ಟಿನಲ್ಲಿ ಈ ಯೋಜನೆಯಡಿ ಕಾರ್ಯ ನಿರ್ವಹಿಸಲಾಗುವುದು.

ಈ ಯೋಜನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ವಿವಿಧ ವಿಭಾಗಗಳು, ಉದ್ಯಮಗಳು, ವೈದ್ಯರು, ದಾನಿಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೂ ಇರಲಿದ್ದಾರೆ. ಇದರಡಿ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಅಧ್ಯಯನ ಕೈಗೊಳ್ಳಲಾಗುತ್ತದೆ. ಮೂಲಭೂತ ಮತ್ತು ಅನ್ವಯಿಕ ಸಂಶೋಧನೆಯ ಮೂಲಕ ವಯಸ್ಸಾಗುವಿಕೆಯನ್ನು ಅರ್ಥೈಸಿಕೊಳ್ಳಲಾಗುವುದು. ವ್ಯಕ್ತಿಯ ಜೀವನದ ಗುಣಮಟ್ಟ ಹೆಚ್ಚಿಸಲು ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಗೆ ಪ್ರಶಾಂತ್ ಪ್ರಕಾಶ್ ಸಹ ಸ್ಥಾಪಕತ್ವದ ಏಸೆಲ್ ಇಂಡಿಯಾ ಆರಂಭಿಕ ದೇಣಿಗೆ ನೀಡಿದೆ.

ಈ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಶಾಂತ್ ಪ್ರಕಾಶ್, ‘ವಯಸ್ಸಾಗುವಿಕೆ ಅನಿವಾರ್ಯ ವಿಧಿ ಲಿಖಿತ ಎಂಬ ಭಾವನೆ ದಟ್ಟವಾಗಿದೆ. ವೃದ್ಧಾಪ್ಯದ ಸಂಕೀರ್ಣಗಳನ್ನು ಅಧ್ಯಯನ ಮಾಡುತ್ತಾ ಹೋದಂತೆ, ವೈವಿಧ್ಯ ಅಂಶಗಳು ಅದನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ವಿಶೇಷವಾಗಿ ಜೀವನಶೈಲಿ, ಸಂಸ್ಕೃತಿ, ವಂಶವಾಹಿ ಮತ್ತು ಪರಿಸರಗಳು ಕಾರಣವಾಗುತ್ತವೆ. ಭಾರತ ಅದ್ವಿತೀಯ ಜನಸಂಖ್ಯಾ ವೈವಿಧ್ಯತೆಯನ್ನು ಹೊಂದಿರುವ ದೇಶ. ವಯಸ್ಸಾಗುವಿಕೆಗೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ಸಂಶೋಧನೆಗಳು ಏನೇನೂ ಸಾಲದು. ವೈವಿಧ್ಯ ಕ್ಷೇತ್ರಗಳ ತಜ್ಞರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.