ಬೆಂಗಳೂರು:‘ಐಎಂಎ ಕಂಪನಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ಎಂದು ಕೋರಿ ಹೂಡಿಕೆದಾರರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಚಿತ್ರದುರ್ಗ ನಗರದ ಮೊಹಮ್ಮದ್ ಸಿರಾಜುದ್ದೀನ್ ಈ ಅರ್ಜಿ ಸಲ್ಲಿಸಿದ್ದು ಶುಕ್ರವಾರ ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು.

* ಇದನ್ನೂ ಓದಿ:‘ಐಎಂಎ’ ಸಾವಿರಾರು ಕೋಟಿ ವಂಚನೆ ಪ್ರಕರಣ | ಆಡಿಟರ್ ಎಸ್ಐಟಿ ವಶಕ್ಕೆ

ಇದೇ 17ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.

"ಐಎಂಎ ಸಂಸ್ಥೆಯಲ್ಲಿ ₹ 10 ಲಕ್ಷ ಹೂಡಿಕೆ ಮಾಡಿದ್ದೇನೆ. ಸಂಸ್ಥೆ ಮುಖ್ಯಸ್ಥ ಮನ್ಸೂರ್ ಅವರು, ಹಾಲಿ-ಮಾಜಿ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಆಪ್ತರಿದ್ದಾರೆ. ತುಂಬಾ ಪ್ರಭಾವಿ ಆಗಿರುವುದರಿಂದ ರಾಜ್ಯ ಪೊಲೀಸರಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಅವರು ತಲೆ ಮರೆಸಿಕೊಂಡು ಒಂದು ವಾರ ಕಳೆದಿದ್ದರೂ ಪೊಲೀಸರು ಪತ್ತೆ ಮಾಡಿಲ್ಲ" ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

* ಇವನ್ನೂ ಓದಿ...

*‘ಐಎಂಎ’; ₹ 1,230 ಕೋಟಿ ವಂಚನೆ ?

*ಮನ್ಸೂರ್ ₹500 ಕೋಟಿ ಆಸ್ತಿ ಒಡೆಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.