ಹುಬ್ಬಳ್ಳಿ/ಕಲಬುರ್ಗಿ: ಒಂದು ಕಡೆ ಕಲ್ಲು ತೂರಾಟ, ವಾಗ್ವಾದ ಬಿಟ್ಟರೆ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕುಂದಗೋಳದಲ್ಲಿ ಶೇ 82.42ರಷ್ಟು ಹಾಗೂ ಚಿಂಚೋಳಿಯಲ್ಲಿ ಶೇ 70.75 ರಷ್ಟು ಮತದಾನವಾಗಿದೆ.

ಕಾಂಗ್ರೆಸ್ ಶಾಸಕ ಸಿ.ಎಸ್. ಶಿವಳ್ಳಿ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರದಲ್ಲಿ ಬೆಳಿಗ್ಗೆ 7ರಿಂದ 11ರವರೆಗೆ ಉತ್ಸಾಹದಿಂದ ಮತದಾನ ನಡೆಯಿತು. ಬಿಸಿಲೇರಿದಂತೆ ಇಳಿಮುಖವಾಯಿತು. ಸಂಜೆ 4ರ ಬಳಿಕ ಮತ್ತೆ ಬಿರುಸುಗೊಂಡಿತು.

ಬೆನಕನಹಳ್ಳಿ ಮತಗಟ್ಟೆ
ಯಲ್ಲಿ ಬೆಳಿಗ್ಗೆ 3 ಇವಿಎಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ 30 ನಿಮಿಷ ಮತದಾನ ಸ್ಥಗಿತಗೊಂಡಿತ್ತು. ಚುನಾವಣಾಧಿಕಾರಿಗಳು ಮತಯಂತ್ರಗಳನ್ನು ಬದಲಾಯಿಸಿ, ಸುಗಮ ಮತದಾನಕ್ಕೆ ಅನುವು ಮಾಡಿಕೊಟ್ಟರು. ಯರಗುಪ್ಪಿ ಮತ್ತು ಹಿರೆನರ್ತಿಯಲ್ಲಿ ಸಂಜೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ನಂತರ ದೋಷ ಸರಿಪಡಿಸಲಾಯಿತು.

ಕಾಂಗ್ರೆಸ್‌ನಿಂದ ಗೆದ್ದಿದ್ದ ಡಾ.ಉಮೇಶ ಜಾಧವ ರಾಜೀನಾಮೆ ಕೊಟ್ಟಿದ್ದರಿಂದಾಗಿ ಚಿಂಚೋಳಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು.

241 ಮತಗಟ್ಟೆಗಳ ಪೈಕಿ 70ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟವು. ಇದರಿಂದಾಗಿ ಕೆಲ ಹೊತ್ತು ಮತದಾನ ಸ್ಥಗಿತಗೊಂಡಿತ್ತು. ಮತಯಂತ್ರಗಳನ್ನು ಬದಲಿಸಿ, ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.