ಕ್ರಾಫ್ಟನ್ ಇಂಕ್ ಆಸಕ್ತಿ: ಜಾಗತಿಕ ಮಟ್ಟದ ಗೇಮಿಂಗ್ ಕಂಪನಿ ಕ್ರಾಫ್ಟನ್ ಇಂಕ್ ಸಹ ಮುಂದಿನ 2–3 ವರ್ಷಗಳಲ್ಲಿ ₹1,245 ಕೋಟಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸಿದೆ. ಕಂಪನಿಯು ಭಾರತದ ವಿವಿಧ ನವೋದ್ಯಮಗಳಲ್ಲಿ ₹1,162 ಕೋಟಿ ಹೂಡಿಕೆಯನ್ನು ಈಗಾಗಲೇ ಮಾಡಿದೆ. ಇ–ಕ್ರೀಡೆಗಳು ಮತ್ತು ಮೊಬೈಲ್ ಫೋನ್ ಗೇಮಿಂಗ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮತ್ತು ಭಾರತದ್ದೇ ಗೇಮಿಂಗ್ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಕಂಪನಿಯೊಂದಿಗೆ ಚರ್ಚಿಸಲಾಗಿದೆ ಎಂದು ನಿಯೋಗವು ತಿಳಿಸಿದೆ.