ಮಂಡ್ಯ: ಪುಲ್ವಾಮಾ ದಾಳಿ ನಡೆದು ಶುಕ್ರವಾರಕ್ಕೆ (ಫೆ.14) ಒಂದು ವರ್ಷವಾದ ಹಿನ್ನೆಲೆಯಲ್ಲಿ ದಾಳಿಯಲ್ಲಿ ಹುತಾತ್ಮರಾಗಿದ್ದ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸಿಆರ್ಪಿಎಫ್ ಯೋಧ ಎಚ್.ಗುರು ಅವರನ್ನು ರಾಜ್ಯ ನೆನೆಯುತ್ತಿದೆ. ಆದರೆ, ಈ ಒಂದು ವರ್ಷದಲ್ಲಿ ಯೋಧ ಗುರು ಕುಟುಂಬ ಹಲವು ಬದಲಾವಣೆ ಕಂಡಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಗುರು ಕುಟುಂಬದಲ್ಲಿ ಕಲಹ; ಹರಿದ ₹15 ಕೋಟಿ

ಪುಲ್ವಾಮ ದಾಳಿಯಲ್ಲಿ ಯೋಧ ಗುರು ಹುತಾತ್ಮರಾಗಿದ್ದಾಗ ನೋವಿನಲ್ಲಿದ್ದ ಕುಟುಂಬಸ್ಥರು

ಭಾರತೀನಗರದ ಯುವಕರು ಇಂದು 10 ಗಂಟೆಗೆ ಪೂಜೆ ಇಟ್ಟುಕೊಂಡಿದ್ದಾರೆ. ಮಳವಳ್ಳಿ- ಭಾರತೀನಗರ ರಸ್ತೆಯ ಸರ್ಕಾರಿ ಭೂಮಿಯಲ್ಲಿ ಗುರು ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆದಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಎಚ್.ಗುರು ನಿವಾಸಕ್ಕೆ ಭೇಟಿ ನೀಡಿದ್ದ ಸುಮಲತಾ

ಎಚ್.ಗುರು ಅವರ ತಾಯಿ ಚಿಕ್ಕಹೊಳ್ಳಮ್ಮ, ತಂದೆ ಹೊನ್ನಯ್ಯ ಅವರೊಂದಿಗೆ ಗುರು ಅವರ ಪತ್ನಿ ಕಲಾವತಿ ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲ. ತಮ್ಮ ಪೋಷಕರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗುರು ಪೋಷಕರು ಭಾರತೀನಗರದಲ್ಲಿಲಾಂಡ್ರಿ ವೃತ್ತಿ ಮುಂದುವರೆಸುತ್ತಿದ್ದಾರೆ.

ಯೋಧ ಗುರು ಪಾರ್ಥಿವ ಶರೀರ ರಾಜ್ಯಕ್ಕೆ ತಂದಿದ್ದ ಸನ್ನಿವೇಶ

ಈಡೇರದ ಶಾಸಕರ ಭರವಸೆ: ಅಂತ್ಯಕ್ರಿಯೆ ನಡೆದ ಸ್ಥಳವನ್ನು ವರ್ಷದೊಳಗೆ ಸ್ಮಾರಕವಾಗಿ ಅಭಿವೃದ್ಧಿಗೊಳಿಸುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ಭರವಸೆ ನೀಡಿದ್ದರು. ಆದರೆ ಈವರೆಗೂ ಭರವಸೆ ಈಡೇರಿಲ್ಲ. ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಅಕ್ಕಪಕ್ಕದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಮೆರವಣಿಗೆ

ಗುರು ಅವರು ಹುತಾತ್ಮರಾದಾಗ ಇಡೀ ರಾಷ್ಟ್ರವೇ ಮರುಗಿತ್ತು. ಅವರಿಗೆ ನೆರವಿನ ಮಹಾಪೂರವೇ ಹರಿದು ಬಂದಿತ್ತು. 15 ಕೋಟಿಗೂ ಹೆಚ್ಚಿನ ಮೊತ್ತದ ಹಣ ಸಂಗ್ರಹವಾಗಿತ್ತು. ಈ ವಿಚಾರವಾಗಿ ಕುಟುಂಬಸ್ಥರಲ್ಲಿ ಕಲಹ ಏರ್ಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.