ಬೆಂಗಳೂರು: ಐಎಂಎ ಸಮೂಹ ಕಂಪನಿಗಳ ಮಾಲೀಕಮನ್ಸೂರ್ ಖಾನ್‌ನದ್ದು ಎನ್ನಲಾದ ಮತ್ತೊಂದು ವಿಡಿಯೊಭಾನುವಾರ ಬಿಡುಗಡೆಯಾಗಿದೆ.

‘ನಾನು ಭಾರತಕ್ಕೆ ಬಂದು ಶರಣಾಗಲು ಸಿದ್ಧನಿದ್ದೇನೆ. ಆದರೆ, ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವಭಯ ಇದೆ’ ಎಂದು ಹೇಳಿಕೊಂಡಿದರುವ ವಿಡಿಯೊವೊಂದು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. 18 ನಿಮಿಷದ ವಿಡಿಯೊದಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ತಮಗೆ ತೊಂದರೆ ಮಾಡಿ, ಸಂಸ್ಥೆ ಮುಚ್ಚಲು ಕುತಂತ್ರ ಹೂಡಿದರು ಎಂದು ಮನ್ಸೂರ್ ಆರೋಪಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ರಾಜ್ಯಸಭೆಯ ಮಾಜಿ ಸದಸ್ಯ ಕೆ. ರಹಮಾನ್ ಖಾನ್, ಮೊಹಮ್ಮದ್ ಉಬೇದುಲ್ಲಾ ಶರೀಫ್. ಮೊಹ್ಮದ್ ಖಲೀದ್ ಅಹ್ಮದ್, ವಿಧಾನ ಪರರಿಷತ್ ಜೆಡಿಎಸ್ ಸದಸ್ಯ, ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ಶರವಣ, ರಹಬರ್ ಫೈನಾನ್ಸ್, ಝೈದ್ ಚಿಟ್ ಫಂಡ್ಸ್, ಮುಫ್ತಿ ಇಫ್ತಿಕಾರ್ ಅಹ್ಮದ್, ಮುಫ್ತಿ ಶಂಶುದ್ದೀನ್ ಬಿಜಿಲಿ, ಮೌಲವಿ ಜೈನುಲ್ಲ ಅಬಿದೀನ್, ನನಗೆ ಮೋಸ ಮಾಡಿದ್ದಾರೆ ಎಂದು ಮನ್ಸೂರ್ ವಿವರಿಸಿದ್ದಾರೆ.

ನಮ್ಮ ಸಂಸ್ಥೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಹರಡಲಾಗುತ್ತಿದೆ. ಕೆಲವು ಶಕ್ತಿಗಳು 12 ವರ್ಷಗಳಿಂದ ಐಎಂಎ ಸಮುಹಕ್ಕೆ ಕಳಂಕ ತರಲು ಪ್ರಯತ್ನಿಸುತ್ತಿದ್ದವು. ವದಂತಿಗಳನ್ನು ಹರಡಿದ ಪರಣಾಮ ಸಂಸ್ಥೆ ನಷ್ಟ ಅನುಭವಿಸುವಂತಾಯಿತು. ಅಲ್ಲದೆ ಅದನ್ನು ಮುಗಿಸುವಲ್ಲಿ ಅವರು ಯಶ್ವಸಿಯಾಗಿದ್ದಾರೆ.

ಈ ಹಿಂದೆಯೂ ನಾನು ಒಂದು ಆಡಿಯೋ ಬಿಡುಗೆ ಮಾಡಿದ್ದೆ. ಅದರಲ್ಲೂ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದೆ. ನಾನು ಮತ್ತು ನನ್ನ ಕುಟುಂಬದ ಬಗ್ಗೆ ಅದರಲ್ಲಿ ಹೇಳಿಕೊಂಡಿದ್ದೆ.

ಇದನ್ನೂ ಓದಿ...ಚಹಾ ಮಾರುತ್ತಿದ್ದವನನ್ನೇ ನಿರ್ದೇಶಕನನ್ನಾಗಿ ಮಾಡಿದ!

ಇಂದು, ಈ ಆಡಿಯೊ ಬಿಡುಗಡೆ ಮಾಡುತ್ತಿರುವುದು ಯಾಕೆಂದರೆ, ಜೂನ್ 19ರಂದು ನಾನು ಭಾರತಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಆದರೆ, ನಾನು ಎಲ್ಲಿಂದ್ದೇನೊ ಅಲ್ಲಿಂದ ಹೋಗಲು ಅವಕಾಶ ಸಿಗಲಿಲ್ಲ. ನನ್ನ ಟಿಕೆಟ್‌ನ್ನು ರದ್ದು ಮಾಡಲಾಗಿತ್ತು.
ನಾನು ದೇಶ ಬಿಟ್ಟಿದ್ದು ಮೊದಲು ತಪ್ಪು. ಆದರೆ, ಆಡಳಿತ ಮಂಡಳಿ ಮತ್ತು ನನ್ನ ಸುತ್ತಮುತ್ತ ಇದ್ದವರೇ ನನಗೆ ಮೋಸ ಮಾಡಿದ್ದಾರೆ. ನನನ್ನು ಶೋಷಣೆ ಮಾಡಲು ಆರಂಭಿಸಿದರು. ಹೀಗಾಗಿ ನನ್ನ ಕುಟುಂಬವನ್ನು ರಹಸ್ಯವಾಗಿಡಬೇಕಾಯಿತು.

ಈಗ ನನ್ನ ಮಾನಸಿಕ ಸ್ಥಿತಿ ಚೆನ್ನಾಗಿದೆ. ನಾನು ವಾಪಸು ಬರಲು ಬಯಸುತ್ತೇನೆ. ಜೂನ್ 14ರಂದು ಬರಲು ಪ್ರಯತ್ನಿಸಿದ್ದೆ. ಅದರೆ ಇಮಿಗ್ರೇಷನ್ ಇಲಾಖೆಯನ್ನು ಸಂಪರ್ಕಿಸುವಂತೆ ನನಗೆ ತಿಳಿಸಿದರು. ಆದರೆ, ಅಂದು ಶುಕ್ರವಾರ ಆಗಿದ್ದರಿಂದ ಅಲ್ಲಿ ಯಾರೂ ಇರಲಿಲ್ಲ.

ಅಲೋಕ್ ಕುಮಾರ್ ಸರ್, 9902129090 ನಂಬರ್‌ಗೆ ವಿವರಗಳನ್ನು ಕಳುಹಿಸಿ. ನೀವು ತೀರ್ಮಾನ ತೆಗೆದುಕೊಳ್ಳತ್ತೀರಿ ಎಂಬ ವಿಶ್ವಾಸ ನನಗಿದೆ.ನಾನು ಸಾರ್ವಜನಿಕರಿಗೆ ಸಹಾಯ ಮಾಡಲು ಬರುತ್ತಿದ್ದೇನೆ. ಸಮಸ್ಯೆ ಏನೇ ಇರಲಿ, ಅದನ್ನು ನಾನು ನಿಮ್ಮ ತಂಡದ ಮುಂದೆ ಹೇಳಿಕೊಳ್ಳುತ್ತೇನೆ. ಕಾನೂನಿನ ಪ್ರಕಾರ ತನಿಖೆಗೆ ಸಹಕರಿಸುತ್ತೇನೆ ಎಲ್ಲವನ್ನೂ ನಾನು ಬಹಿರಂಗಪಡಿಸುತ್ತೇನೆ.

ಸುಮಾರು 21 ಸಾವಿರ ಕುಟುಂಬಗಳಿಗೆ ಐಎಂಎ ಆದಾಯ ನೀಡಿದೆ. 18 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. 13 ವರ್ಷಗಳಿಂದ 7300 ಕುಟುಂಬಗಳು ರೇಷನ್ ಪಡೆಯುತ್ತಿದ್ದಾರೆ. ಇಷ್ಟೊಂದು ಜನರಿಗೆ ನೆರವು ನೀಡಿದ್ದಾಗ. ಅವರು ಯಾರೂ ನನ್ನ ರಕ್ಷಣೆಗೆ ಬಾರದಿರುವುದು ನನಗೆ ಬೇಸರ ತಂದಿದೆ.

ಇದನ್ನೂ ಓದಿ...ಜಮೀನು ಮಾರಿ ₹ 70 ಲಕ್ಷ ಹೂಡಿದ್ದ ಅಲೆಮಾರಿ

ಈವರೆಗೆ 2006–19ನಿಂದ ₹ 12 ಸಾವಿರ ಕೋಟಿ ಲಾಭವನ್ನು ವಿವಿಧ ರೀತಿಯಲ್ಲಿ ಹೂಡಿಕೆದಾರರಿಗೆ ಹಂಚಲಾಗಿದೆ. ₹ 2000 ಮೂಲ ಬಂಡವಾಳವನ್ನು ವಾಪಸು ನೀಡಲಾಗಿದೆ. ಈಗ ಉಳಿದಿರುವ ಆಸ್ತಿಯಲ್ಲಿ ₹ 1,350 ಕೋಟಿ ಹಣವನ್ನು ಜನರಿಗೆ ಪಾವತಿ ಮಾಡಬಹುದು.
ಶೇ. 99 ರಷ್ಟು ಜನ ನನ್ನ ವಿರುದ್ಧ ತಪ್ಪು ವದಂತಿಗಳನ್ನು ಹರಡುತ್ತಿದ್ದಾರೆ. ಕೇವಲ ಶೇ. 1ರಷ್ಟು ಜನ ನನ್ನ ಹಿಂದೆ ಇದ್ದಾರೆ. ನನಗೆ ವಂಚಿಸುವ ಯೋಜನೆ ಅಲ್ಲ. ನನಗೆ ವಂಚಿಸಿದವರ ಪಟ್ಟಿ ನನ್ನ ಬಳಿ ಇದೆ. ಅದನ್ನು ನ್ಯಾಯಾಲಯದ ಮುಂದಿಡಲು ಸಿದ್ಧನಿದ್ದೇನೆ. ಎಲ್ಲರ ಹೆಸರನ್ನೂ ಬಹಿರಂಗಪಡಿಸಲು ತಯಾರಿದ್ದೇನೆ. ಆದರೆ, ಈ ಜನರು ನನ್ನನ್ನು ಜೀವಂತ ಬಿಡಲ್ಲ.

ನಮ್ಮದು ದೊಡ್ಡ ಕಂಪನಿ. ಹೀಗಾಗಿ ಇದರಲ್ಲಿರುವವರೆಲ್ಲರೂ ದೊಡ್ಡ ವ್ಯಕ್ತಿಗಳೇ. ಈ ಹೆಸರುಗಳನ್ನು ಬಹಿರಂಗಪಡಿಸಿದರೆ ಭಾರತದ ರಹಸ್ಯ ಸ್ಥಳದಲ್ಲಿರುವ ನನ್ನ ಕುಟುಂಬವನ್ನು ಪತ್ತೆ ಹಚ್ಚುತ್ತಾರೆ ಮತ್ತು ಮುಗಿಸಿಬಿಡುತ್ತಾರೆ.

ನಾನು ಅಲ್ಲಿಗೆ ಬಂದ ಕೂಡಲೇ ಅವರು ನನ್ನನ್ನು ಮುಗಿಸಿಬಿಡಬಹುದು. ಮತ್ತು ನನ್ನ ಬಾಯಿ ಮುಚ್ಚಿಸಬಹುದು. ಹಾಗಾಗಿ ನಾನು ಮರಳಿ ಬರುತ್ತಿಲ್ಲ. ಕೊನೆಯ ಆಡಿಯೋದಲ್ಲಿ ನಾನು ಸಾಯುವ ಬಗ್ಗೆ ಪ್ರಸ್ತಾಪಿಸಿದ್ದೆ. ಜನರೇ ನನ್ನ ಕೊಲ್ಲಲ್ಲು ಸಿದ್ಧರಿದ್ದಾಗ ನನ್ನನ್ನು ನಾನೇ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲಿ’

ಕಪ್ಪು ಹಣ ನೀಡಿದಾಗ ಅದಕ್ಕೆ ರಸೀದಿ ಅಥವಾ ದಾಖಲೆಗಳು ಇರುವುದಿಲ್ಲ. ಆದರೆ, ಸಾರ್ವಜನಿಕರ ಹಣ ಆಗಿರುವುದರಿಂದ ಅದನ್ನು ಮರು ಪಾವತಿಸಲೇ ಬೇಕು. ಅವರೆಲ್ಲರ ಹಣಕ್ಕೆ ನಾನೇ ಹೊಣೆಗಾರ.

ಇದನ್ನೂ ಓದಿ:‘ಧರ್ಮದ ಹೆಸರಲ್ಲಿ ಮೋಡಿ ಮಾಡಿದ ಖಾನ್’

ನಮ್ಮ ಬಳಿ ₹500 ಕೋಟಿಯ ಸ್ಥಿರಾಸ್ತಿ ಇದೆ. ನಾನು ಅಲ್ಲಿಂದ ಬಂದಾಗ 120 ಕಿಲೋ ಚಿನ್ನಾಭರಣ ಮತ್ತು 600 ಕಿಲೋ ಚಿನ್ನದ ಗಟ್ಟಿ ಇತ್ತು. ಶುಕ್ರವಾರ ಅದನ್ನು ಅಲ್ಲಿಂದ ಸಾಗಿಸಿದ ಮಾಹಿತಿ ಸಿಕ್ಕಿದೆ. ಕೆಲವು ನಿರ್ದೇಶಕರು ಮತ್ತು ಸಹೋದರರು ಆ ಕೆಲಸ ಮಾಡಿದ್ದರೆ. ನಿರ್ದೇಶಕರಾಗಿದ್ದ ನಿಜಾಮುದ್ದೀನ್ ಮೊಹಮ್ಮದ ವಾಸೀಂ, ಕಟ್ಟಡ ನಿರ್ಮಾಣಕಾರ ಖಾಲಿದ್ ಅಹ್ಮದ್ ಮತ್ತು ಅವನ ಮಗ ಫಹಾದ್ ಅಹ್ಮದ್ ಕೀ ತೆಗದು ತೆಗೆದುಕೊಂಡು ಹೋಗಿದ್ದಾರೆ. ನಿರ್ದೇಶಕ ನೀಬೀದ್ ಅಹ್ಮದ್ ಅವ್ಯವಹಾರ ಕೂಡಾ ಮಾಡಿದ್ದ. ಮೂರು ತಿಂಗಳ ಹಿಂದೆಯೇ ಈ ಎಲ್ಲರ ಬಗ್ಗೆ ನನಗೆ ಅನುಮಾನಗಳಿತ್ತು. ಅವರೆಲ್ಲ ನಾನು ಹೊರಗೆ ಹೋಗುವುದಕ್ಕೆ ಕಾಯುತ್ತಿದ್ದರು.

ಐಎಂಎಗೆ ಹಣ ನೀಡಲು ಎನ್‌ಬಿಎಫ್‌ಸಿ (Non-bank financial institution) ಸಿದ್ಧವಿತ್ತು. ಆದರೆ, ಅಗತ್ಯದ ಪತ್ರ ನೀಡಲು ಒಬ್ಬ ಐಎಎಸ್ ಅಧಿಕಾರಿ ₹ 10 ಕೋಟಿ ಕೇಳಿದರು. ಅಷ್ಟ ಹಣ ಕೊಡಲು ವಿಳಂಬವಾಯಿತು. ಅದನ್ನು ನ್ಯಾಯಾಲಯದ ಮುಂದಿಡಲು ಸಿದ್ಧನಿದ್ದೇನೆ.

ನಾನು ಯಾರನ್ನು ಸಂಪರ್ಕಿಸಬೇಕು ಎಂದು ದಯಮಾಡಿ ನನಗೆ ವಿವರ ನೀಡಿ. ಅವರನ್ನು ಭೇಟಿ ಮಾಡಿ ನಾನು ತಕ್ಷಣ ಭಾರತಕ್ಕೆ ವಾಪಸು ಬರುತ್ತೇನೆ.

ಈ ಎಲ್ಲರೂ ಹೊಣೆಗಾರರಾಗುವಂತೆ ಅಧಿಕಾರಿಗಳು ಮಾಡಬೇಕು. ₹ 400 ಕೋಟಿ ಅಂದರೆ ಜೋಕ್ ಅಲ್ಲ. ಎಲ್ಲವೂ ಲೆಕ್ಕ ಇರಬೇಕು. ಈ ಬಗ್ಗೆ ಸಿಬಿಐ ತನಿಖೆ ಆಗಲಿ. ಸಾವಿಗೆ ಅಥವಾ ಜೈಲಿಗೆ ಹೋಗಲು ನಾನು ಭಯಪಡುವುದಿಲ್ಲ.

ಇನ್ನಷ್ಟು...

*‘ಐಎಂಎ ಸಮೂಹ ಕಂಪನಿ’ ವಿವಾದ| ‘ಪ್ರಕರಣ ಸಿಸಿಬಿಗೆ ವಹಿಸಲಾಗಿದೆ’ –ಕುಮಾರಸ್ವಾಮಿ

*11 ಸಾವಿರ ಜನರಿಗೆ ದೋಖಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.