ಕರ್ನಾಟಕದ ಕರಾವಳಿ ತೀರದ ಉದ್ದಕ್ಕೂ ಕಡಲ್ಕೊರೆತ ಸಮಸ್ಯೆ ನೀಗಿಸಲು ನಾಲ್ಕು ದಶಕಗಳಿಂದ ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನಿಂದ ಯೋಜನೆ ಜಾರಿಗೊಳಿಸಿದ್ದು, ₹ 864 ಕೋಟಿ ವೆಚ್ಚವಾಗಿದೆ. ವಿಪರ್ಯಾಸವೆಂದರೆ ಆ ಬಳಿಕವೂ ಕಡಲ್ಕೊರೆತ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಕಡಲ್ಕೊರೆತದಿಂದ ನಲುಗಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿನ ಸಂತ್ರಸ್ತರ ಸ್ಥಿತಿ–ಗತಿ, ಸಮಸ್ಯೆಗೆ ಪರಿಹಾರದ ಮಾಹಿತಿ ಈ ವಿಡಿಯೊದಲ್ಲಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.