ಬೆಂಗಳೂರು: ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಸರವಣ ಗೆಲ್ಲದ ಕಾರಣ ಅನರ್ಹ ಶಾಸಕ ರೋಷನ್ ಬೇಗ್ ಅವರ ರಾಜಕೀಯ ಭವಿಷ್ಯ ಮಸುಕಾಗಿದೆ.

ಬಿಜೆಪಿಗೆ ಪ್ರವೇಶ ಸಿಗದ ಕಾರಣ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದರು. ಆದರೆ, ಬಿಜೆಪಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಿ, ಗೆಲ್ಲಿಸುವ ಭರವಸೆಯನ್ನೂ ನೀಡಿದ್ದರು. ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದರು. ಆದರೆ, ಶಿವಾಜಿನಗರ ಕ್ಷೇತ್ರದಲ್ಲಿ ಬೇಗ್ ಜಾದೂ ನಡೆಯಲಿಲ್ಲ.

ರಿಜ್ವಾನ್ ಅರ್ಷದ್ ಅವರನ್ನು ಕಟ್ಟಿ ಹಾಕುವ ತಂತ್ರ ಫಲಿಸದ ಕಾರಣ, ಬಿಜೆಪಿಯಲ್ಲಿ ಅವರ ಮಾತುಗಳಿಗೆ ಕಿಮ್ಮತ್ತು ಸಿಗುವ ಸಾಧ್ಯತೆ ಕಡಿಮೆ. ಮುಂದಿನ ದಿನಗಳಲ್ಲಿ ತಮ್ಮ ಅಥವಾ ತಮ್ಮ ಪುತ್ರನಿಗೆ ಕಮಲ ಪಕ್ಷದಲ್ಲಿ ಭವಿಷ್ಯ ಕಂಡುಕೊಳ್ಳುವ ಅವರ ಆಸೆ
ಈಡೇರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಮೈತ್ರಿ ಸರ್ಕಾರದ ಪತನದಲ್ಲಿ ಅವರ ಪಾತ್ರವೂ ಇರುವುದರಿಂದ ಭವಿಷ್ಯದಲ್ಲಿ ಬೇಗ್ ಅವರ ಪುತ್ರನಿಗೆ ಬಿಜೆಪಿ ಆಶ್ರಯ ನೀಡಿದರೂ ಅಚ್ಚರಿ ಇಲ್ಲ. ಈ ಮೂಲಕ ವಾಗ್ದಾನವನ್ನು ಉಳಿಸಿಕೊಂಡಂತಾಗುತ್ತದೆ ಎಂಬ ಮಾತೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.