ವಿಜಯಪುರ: ‘ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿ, ಬೆಂಗಳೂರು ಮತ್ತು ಉಡುಪಿಯಲ್ಲಿ ಪರ್ಸಂಟೇಜ್ ಅಂಗಡಿ ತೆಗೆದಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿಯ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಚಿವೆ ಹೆಬ್ಬಾಳಕರ ಪಿಎ ಹೆಸರನ್ನು ಬರೆದಿಟ್ಟಿರುವುದನ್ನು ನೋಡಿದರೆ ಸಚಿವರ ಒತ್ತಡದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆರೋಪಿಯನ್ನು ತಕ್ಷಣ ಬಂಧಿಸಬೇಕು. ಈ ಬಗ್ಗೆ ತನಿಖೆಯಾದರೆ ಸಚಿವೆ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಆಚೆ ಬರಲಿದೆ. ಮುಖ್ಯಮಂತ್ರಿಯವರು ತಕ್ಷಣ ಲಕ್ಷ್ಮಿ ಹೆಬ್ಬಾಳಕರ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಭ್ರಷ್ಟಾಚಾರದ ಪಾಪದ ಫಲ ತುಂಬಿದೆ: ಬಸನಗೌಡ ಪಾಟೀಲ ಯತ್ನಾಳ

‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಭ್ರಷ್ಟಾಚಾರದ ಪಾಪದ ಫಲ ತುಂಬಿದೆ. ಬೆಳಗಾವಿಯಲ್ಲಿ ಸಣ್ಣ ಕೆಲಸಕ್ಕೂ ಜನ ಲಂಚ ಕೊಡುವ ಪರಿಸ್ಥಿತಿ ಬಂದಿದೆ. ಡೆತ್ ನೋಟ್ನಲ್ಲಿ ಸಚಿವರ ಪಿಎ ಹೆಸರಿದೆ ಎಂದರೆ ಅದಕ್ಕೆ ಸಚಿವೆಯೇ ಕಾರಣ. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ಕೊಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

‘ಈ ಹಿಂದೆ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ನವರು 40 ಪರ್ಸೆಂಟ್ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ 90 ಪರ್ಸೆಂಟ್ ಲಂಚದ ಸರ್ಕಾರವಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ನವರು ಬೊಮ್ಮಾಯಿ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದ್ದರು. ನಿಜವೇ ಆಗಿದ್ದರೇ ಇದುವರೆಗೆ ಏಕೆ ತನಿಖೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

ನೈತಿಕ ಹೊಣೆ ಹೊತ್ತು ಸಚಿವೆ ರಾಜೀನಾಮೆ ನೀಡಲಿ: ಸುಭಾಷ ಪಾಟೀಲ

‘ರುದ್ರಣ್ಣ ಅವರು ಹಾಕಿದ ಮೆಸೇಜ್ನಲ್ಲಿರುವ ಸೋಮು ಎಂಬ ವ್ಯಕ್ತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಸಹಾಯಕ. ಈ ವ್ಯಕ್ತಿಯೇ ಕಿರುಕುಳ ನೀಡಿದ್ದಾನೆ ಎಂದು ಮೃತ ವ್ಯಕ್ತಿ ಸ್ಪಷ್ಟವಾಗಿ ಬರೆದಿದ್ದಾನೆ. ಇದರ ನೈತಿಕ ಹೊಣೆ ಹೊತ್ತು ಸಚಿವೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಯೇ ಇವರನ್ನು ಸಚಿವ ಸಂಪುಟದಿಂದ ತೆರವು ಮಾಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಆಗ್ರಹಿಸಿದರು.

‘ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಾಗ ಕೆ.ಎಸ್.ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆಗ ಹೋರಾಟ ಮಾಡಿದ ಲಕ್ಷ್ಮಿ ಹೆಬ್ಬಾಳಕರ ಈಗ ಅಂಥದ್ದೇ ಆರೋಪ ಎದುರಿಸುತ್ತಿದ್ದಾರೆ’ ಎಂದೂ ಆರೋಪಿಸಿದರು.

‘ರುದ್ರಣ್ಣ ತನ್ನ ವರ್ಗಾವಣೆ ನಿಲ್ಲಿಸಿ ಎಂದು ಸೋಮು ಎಂಬಾತನಿಗೆ ₹2 ಲಕ್ಷ ಕೊಟ್ಟಿದ್ದ. ಆ ಬಗ್ಗೆ ಮನೆಯಲ್ಲಿ ಚರ್ಚೆ ಮಾಡಿದ್ದ’ ಎಂದು ತಾಯಿ ಮಲ್ಲವ್ವ ಕೂಡ ಹೇಳಿಕೆ ನೀಡಿದ್ದಾರೆ.

‘ಗ್ರೂಪಿನಲ್ಲಿ ಮೆಸೇಜ್ ಹಾಕಿದ್ದರೂ ನಿರ್ಲಕ್ಷ್ಯ’

ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರುದ್ರಣ್ಣ ಸೋಮವಾರ ಸಂಜೆ 7.31ಕ್ಕೆ ಗ್ರೂಪಿನಲ್ಲಿ ಮೆಸೇಜ್ ಹಾಕಿದ್ದರು. ಅದನ್ನು ನೋಡಿ ತಹಶೀಲ್ದಾರ್ ಅವರನ್ನು ಗ್ರೂಪಿನಿಂದ ಹೊರಹಾಕಿದರು. ಆದರೆ, ಈ ವಿಚಾರವನ್ನು ಪೊಲೀಸರಿಗೆ ಅಥವಾ ಮನೆಯವರಿಗೆ ಏಕೆ ತಿಳಿಸಲಿಲ್ಲ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.

ಮಂಗಳವಾರ ಬೆಳಿಗ್ಗೆ ತಮ್ಮ ಕಚೇರಿಗೆ ಬಂದ ತಹಶೀಲ್ದಾರ್ ಬಸವರಾಜ ನಾಗಾರಾಳ, ರುದ್ರಣ್ಣನ ಶವ ನೋಡಿ ಮರಳಿ ಹೋದರು. ಸ್ಥಳದಲ್ಲಿದ್ದ ಪೊಲೀಸರೂ ಅವರನ್ನು ವಶಕ್ಕೆ ಪಡೆಯುವ ಗೋಜಿಗೆ ಹೋಗಲಿಲ್ಲ. ಪ್ರಮುಖ ಆರೋಪಿಯಾದ ಅವರು ಇಡೀ ದಿನ ಕಾಣಿಸಿಕೊಳ್ಳಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.