ಬೆಂಗಳೂರು: ‘ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಕೆಲಸದ ದಿನವಾದ ಆಗಸ್ಟ್ 27ಕ್ಕೆ (ಮಂಗಳವಾರ) ನಡೆಸಲು ಕೆಪಿಎಸ್‌ಸಿ ನಿರ್ಧರಿಸಿರುವುದರಿಂದ ಅಂಗವಿಕಲರಿಗೆ ‘ಸ್ಕ್ರೈಬ್’ (ಬರಹಗಾರ ಸೌಲಭ್ಯ) ಲಭ್ಯವಾಗುವುದಿಲ್ಲ. ಹೀಗಾಗಿ, ಪರೀಕ್ಷೆಯನ್ನು ಮುಂದೂಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಅಖಿಲ ಕರ್ನಾಟಕ ಅಂಗವಿಕಲರ ಹೋರಾಟ ಸಮಿತಿ ಮನವಿ ಸಲ್ಲಿಸಿದೆ.

‘ವಿವಿಧ ಅಂಗಗಳ ನ್ಯೂನತೆ ಇರುವವವರು ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲಸದ ದಿನ ಪೂರ್ವಭಾವಿ ಪರೀಕ್ಷೆ ನಡೆಸಿದರೆ ಈ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯಕರು ಸಿಗುವುದಿಲ್ಲ. ಇದರಿಂದ ಅಂಗವಿಕಲ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆಯಿದೆ. ಹೀಗಾಗಿ ಕೆಲಸದ ದಿನ ಹೊರತುಪಡಿಸಿ, ಭಾನುವಾರ ಅಥವಾ ಇತರ ರಜಾದಿನದಂದು ಪರೀಕ್ಷೆ ನಡೆಸಬೇಕು’ ಎಂದೂ ಸಮಿತಿ ಒತ್ತಾಯಿಸಿದೆ.

ಅಭ್ಯರ್ಥಿಗಳ ದೂರು: ‘ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಆಗಸ್ಟ್ 26ರಂದು ನಡೆಸಲು ನಿಗದಿಪಡಿಸಿದ್ದ ಯುಜಿಸಿ– ನೆಟ್ ಪರೀಕ್ಷೆಯನ್ನು ಆ. 27ರಂದು ನಡೆಸಲು ಮರು ನಿಗದಿಪಡಿಸಿದೆ. ಆ. 21ರಿಂದ ಸೆ. 4ರವರೆಗೆ ಯುಜಿಸಿ ನೆಟ್ ಪರೀಕ್ಷೆ ಇರುವುದು ಗೊತ್ತಿದ್ದರೂ, ಗೆಜೆಟೆಡ್ ಪೂರ್ವಭಾವಿ ಪರೀಕ್ಷೆಯನ್ನು ಆ. 27ರಂದು ನಡೆಸಲು ಕೆಪಿಎಸ್‌ಸಿ ನಿರ್ಧರಿಸುವುದು ಬೇವಾಬ್ದಾರಿತನ’ ಎಂದು ಕೆಲವು ಅಭ್ಯರ್ಥಿಗಳು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.