ಬೆಳಗಾವಿ: ‘ಕೊಲೆ ಆರೋಪಿ, ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಬೇರೆಡೆ ಸ್ಥಳಾಂತರಿಸುವ ಆಲೋಚನೆ ನಡೆದಿದೆ. ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಬೇಕೋ, ಬೇರೆಡೆ ಕಳಿಸಬೇಕೋ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದರು.

‘ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ವಿಚಾರವಾಗಿ ಏಳು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಖುದ್ದು ಪರಿಶೀಲನೆ ನಡೆಸಲಿದ್ದಾರೆ. ಇನ್ನೂ ಯಾರ್‍ಯಾರ ಮೇಲೆ ಕ್ರಮ ಜರುಗಿಸಬೇಕೋ ಅದನ್ನು ಮಾಡುತ್ತೇವೆ’ ಎಂದರು.

‘ಸಿದ್ದರಾಮಯ್ಯ ಸರ್ಕಾರ ಕೇವಲ ದುಡ್ಡಿದ್ದವರ ಪರ’ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವು ಐದು ಗ್ಯಾರಂಟಿಗಳನ್ನು ಬಡವರಿಗಾಗಿ ಜಾರಿ ಮಾಡಿದ್ದೇವೆ. ಅವರೇನು ಮಾಡಿದ್ದಾರೆ? ಬಡವರಿಗೆ ಏನಾದರೂ ಮಾಡಿದ್ದರೆ ಹೇಳಲಿ ನೋಡೋಣ’ ಎಂದರು.
.ದರ್ಶನ್ಗೆ ಜೈಲಿನಲ್ಲಿ ವಿಶೇಷ ಆತಿಥ್ಯ?: ಫೋಟೊ, ವಿಡಿಯೊ ಬಹಿರಂಗ.ಕೊಲೆ ಆರೋಪಿ ದರ್ಶನ್ಗೆ ವಿಶೇಷ ಆತಿಥ್ಯ; ತಪ್ಪಿತಸ್ಥರ ಅಮಾನತಿಗೆ ಸಿಎಂ ಸೂಚನೆ.ಕೊಲೆ ಆರೋಪಿ ದರ್ಶನ್ಗೆ ವಿಶೇಷ ಆತಿಥ್ಯ; ಪರಪ್ಪನ ಅಗ್ರಹಾರದ 7 ಸಿಬ್ಬಂದಿ ಅಮಾನತು.ಕೊಲೆ ಆರೋಪಿ ದರ್ಶನ್ಗೆ ವಿಶೇಷ ಆತಿಥ್ಯ: ಫೋಟೊ ಬಹಿರಂಗವಾಗಿದ್ದು ಹೇಗೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.