ಮಂಡ್ಯ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಮಾರ್ಚ್ 17ರಂದು ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಗರುಡ ಧ್ವಜಾರೋಹಣ ಮಾಡುವ ಮೂಲಕ 10 ದಿನಗಳ ಉತ್ಸವಕ್ಕೆ ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಜಾತ್ರಾ ಮಹೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸುವ ಸಂಕೇತವಾಗಿ ಚಿನ್ನದ ಧ್ವಜಸ್ತಂಭದ ಮೇಲೆ ಗರುಡ ಪಟ ಏರಿಸಲಾಯಿತು. ಮಾರ್ಚ್ 17ರಂದು ರಾತ್ರಿ 8 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಧಾರಣೆ ಮಾಡಲಾಗುತ್ತದೆ.

ಮಾರ್ಚ್ 19ರಂದು ಗಜೇಂದ್ರಮೋಕ್ಷ, ಗಜ, ಅಶ್ವವಾಹನೋತ್ಸವ, ಮಾರ್ಚ್ 20ರಂದು ಮಹಾರಥೋತ್ಸವ, ಬಂಗಾರದ ಪಲ್ಲಕ್ಕಿ ಸೇವೆ ನಡೆಯಲಿದೆ. ಮಾರ್ಚ್ 21ರಂದು ರಾತ್ರಿ ದೇವರಿಗೆ ರಾಜಮುಡಿ ಧಾರಣೆ, ತೆಪ್ಪೋತ್ಸವ ನೆರವೇರಲಿದೆ. 22ರಂದು ಸಂಧಾನಸೇವೆ, ಕಲ್ಯಾಣಿಯಲ್ಲಿ ತೀರ್ಥಸ್ನಾನ ನಡೆಯಲಿದೆ.

ಲಕ್ಷ್ಮಿಜನಾರ್ದನ ದೇಗುಲದಲ್ಲಿ ಪ್ರಥಮ ಪೂಜೆ ನೆರವೇರಿಸಿ ಮೇಲುಕೋಟೆಗೆ ಮೆರವಣಿಗೆ ಮೂಲಕ ಬಿಗಿ ಭದ್ರತೆ ನಡುವೆ ಕೊಂಡೊಯ್ಯಲಾಗುತ್ತದೆ.

ಮಾರ್ಗ ಮಧ್ಯೆ ಹಳ್ಳಿಗಳ ಜನರು ಸ್ವಾಗತ ಕೋರಿ, ಪೂಜೆ ಸಲ್ಲಿಸುತ್ತಾರೆ. ಮಾರ್ಗದಲ್ಲಿ ವೈರಮುಡಿ ಮಂಟಪಗಳಿದ್ದು ಅಲ್ಲಿ ಕಿರೀಟ ಇಟ್ಟು ಪೂಜಿಸಲಾಗುತ್ತದೆ. ಉತ್ಸವಕ್ಕೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷ ವಿಶೇಷ ದೀಪಾಲಂಕಾರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.