ಬೆಂಗಳೂರು: ವಕ್ಫ್ ಆಸ್ತಿಗಳ ಒತ್ತುವರಿ ಯನ್ನು ತೆರವು ಮಾಡಿಸಬೇಕು ಮತ್ತು ಪಹಣಿಗಳಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಬೇಕು ಎಂಬ ನಿರ್ಧಾರವು ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲೇ ಆಗಿತ್ತು. ಅದೇ ಅವಧಿಯಲ್ಲೇ ರೈತರಿಗೆ ಮತ್ತು ಭೂಮಾಲೀಕರಿಗೆ ಅತಿಹೆಚ್ಚು ನೋಟಿಸ್ಗಳನ್ನು ನೀಡಲಾಗಿತ್ತು.

2018–2023ರ ನಡುವೆಬಿಜೆಪಿ ಶಾಸಕರಾಗಿದ್ದ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿಯು, ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ವಕ್ಫ್ ಅಧಿಕಾರಿಗಳು, ಜಿಲ್ಲಾಧಿಕಾರಿ ಗಳ ಜತೆ ಸಾಲು–ಸಾಲು ಸಭೆ ನಡೆಸಿತ್ತು. ಆಸ್ತಿಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳು ವಂತೆ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಆನಂತರವೇ ವಕ್ಫ್ ಆಸ್ತಿ ಗಳನ್ನು ಗುರುತಿಸುವ, ಅಧಿಸೂಚನೆ ಹೊರಡಿಸುವ ಮತ್ತು ಒತ್ತುವರಿದಾರ ರಿಗೆ ನೋಟಿಸ್ ನೀಡುವ ಕಾರ್ಯವನ್ನು ಚುರುಕುಗೊಳಿಸಲಾಗಿತ್ತು.

ಹೀಗಾಗಿಯೇ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಟ್ಟು 2,865 ಎಕರೆ 9 ಗುಂಟೆ ವಿಸ್ತೀರ್ಣದ ಜಮೀನನ್ನು ‘ವಕ್ಫ್ ಆಸ್ತಿ’ ಎಂದು ಹೊಸದಾಗಿ ಅಧಿಸೂಚನೆ
ಹೊರಡಿಸಲಾಗಿತ್ತು.

‘ವಕ್ಫ್ ಆಸ್ತಿ ಎಂದು ನಮೂದಿಸಿ’

ವ್ಯಕ್ತಿಗಳ ಹೆಸರಿನಲ್ಲಿ ಇರುವ ವಕ್ಫ್ ಆಸ್ತಿಗಳ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಿ ಎಂದು ಇದೇ ಸಮಿತಿ ಸೂಚಿಸಿತ್ತು.

ವಕ್ಫ್ ಮಂಡಳಿ ಸಲ್ಲಿಸಿರುವ ದಾಖಲೆಗಳಲ್ಲಿ ವಕ್ಫ್ ಆಸ್ತಿಗಳು ಎಂದು ನಮೂದು
ಮಾಡದೇ, ವೈಯಕ್ತಿಕ ಹೆಸರಿನಲ್ಲಿರುವ ಆಸ್ತಿಗಳಲ್ಲಿ ಅಕ್ರಮವಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಾದ್ಯಂತ ವಕ್ಫ್ ಆಸ್ತಿಗಳನ್ನು ತಾಲ್ಲೂಕುವಾರು ಪರಿಶೀಲಿಸಬೇಕು. ಕಂದಾಯ ಇಲಾಖೆಯ ಭೂಮಿ ಸಾಫ್ಟ್ವೇರ್ ನಲ್ಲಿ ನಿಯಮಾನುಸಾರ,
ವಕ್ಫ್ ಆಸ್ತಿ ಎಂದು ನಮೂದಿಸಬೇಕು ಎಂದು ಸೂಚಿಸಲಾಗಿದೆ.

ಕೆ.ಆರ್.ಮಾರುಕಟ್ಟೆಯಂತೆ ಆದಾಯ

ಕೆ.ಆರ್.ಮಾರುಕಟ್ಟೆಯು ವಕ್ಫ್ ಆಸ್ತಿ ಎಂಬುದನ್ನು ಬಿಜೆಪಿ ಸರ್ಕಾರದ ಅವಧಿಯ ಸಮಿತಿಯು ವರದಿ ಗುರುತಿಸಿದೆ. ಜತೆಗೆ ಈ ವರದಿಯನ್ನು ವಿಧಾನಸಭೆ ಅಂಗೀಕರಿಸಿದೆ.

‘ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯನ್ನು ಒಳಗೊಂಡಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಕ್ಫ್ ಆಸ್ತಿಗಳಲ್ಲಿ ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ. ಅವುಗಳ ಆದಾಯದಲ್ಲಿ ಶೇ 7ರಷ್ಟರ ಪಾಲಿನಂತೆ ವಕ್ಫ್ ಮಂಡಳಿಗೆ ವಾರ್ಷಿಕ ₹6 ಕೋಟಿ ಬರುತ್ತಿದೆ. ಆದರೆ, ಈ ರೀತಿ ಆರ್ಥಿಕ ಚಟುವಟಿಕೆ ನಡೆಯುತ್ತಿರುವ ಎಲ್ಲ ವಕ್ಫ್ ಆಸ್ತಿಗಳಿಂದ ಆದಾಯ ಬರುತ್ತಿಲ್ಲ’ ಎಂದು ಸಮಿತಿಯು ವರದಿಯಲ್ಲಿ ಹೇಳಿತ್ತು.

‘ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವ ವಕ್ಫ್ ಆಸ್ತಿಗಳಿಗೆ ಯಾವುದೋ ಕಾಲದಲ್ಲಿ ಬಾಡಿಗೆ ಮತ್ತು ಭೋಗ್ಯ ನಿಗದಿ ಮಾಡಿದ್ದು, ಇದರಿಂದ ವಕ್ಫ್ ಮಂಡಳಿಗೆ ಮತ್ತು ಸರ್ಕಾರಕ್ಕೆ ತೀವ್ರ ನಷ್ಟವಾಗುತ್ತಿದೆ. ಅಂತಹ ಆಸ್ತಿಗಳಿಗೆ ಸಂಬಂಧಿಸಿದಂತೆ ಎಸ್.ಆರ್ (ಸ್ಥಿರಾಸ್ತಿ ಮಾರ್ಗಸೂಚಿ ದರ) ಮೌಲ್ಯದ ಪ್ರಕಾರ ಜಿಲ್ಲಾಧಿಕಾರಿಗಳು ಬಾಡಿಗೆ ಮತ್ತು ಭೋಗ್ಯ ಸಂಬಂಧಿಸಿದಂತೆ ಹೊಸ ಆದೇಶಗಳನ್ನು ಹೊರಡಿಸಬೇಕು. ಈ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಸಮಿತಿ ಶಿಫಾರಸು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.