ಧಾರವಾಡ: ‘ಧಾರವಾಡ ಸಾಹಿತ್ಯ ಸಂಭ್ರಮ’ದ ಆರನೇ ಆವೃತ್ತಿಯು ಜನವರಿ 19ರಿಂದ ಮೂರು ದಿನ, ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ.

‘ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೇ?’, ‘ಕನ್ನಡ ರಂಗಭೂಮಿ: ಪರಂಪರೆ, ಪರಿವರ್ತನೆ, ಮತ್ತು ಭವಿಷ್ಯ’, ಕನ್ನಡ ಲಿಪಿಯ ಸುಧಾರಣೆ, ಅಡಿಗರ ಕವಿತೆಗಳ ಓದು, ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ನೀತಿ, ಆದಿಲ್‌ಶಾಹಿ ಸಾಹಿತ್ಯ, ಸಾಹಿತ್ಯ ಕೃತಿಗಳ ಮರು ಓದು, ಕಾವ್ಯ ಮತ್ತು ಸಂಗೀತದ ಸಂಬಂಧ, ಪರಿಸರ ಮತ್ತು ಅಭಿವೃದ್ಧಿ ಹೀಗೆ ಹಲವಾರು ಗೋಷ್ಠಿಗಳು ನಡೆಯಲಿವೆ.

ನೋಂದಣಿ ಪ್ರಕ್ರಿಯೆ ಹಾಗೂ ಇತರ ವಿವರಗಳನ್ನು ಇದೇ ತಿಂಗಳ ಮೂರನೇ ವಾರದಲ್ಲಿ ಪ್ರಕಟಿಸಲಾಗುವುದು’ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾಮಸ್ತಕಾಭಿಷೇಕ: ಬಾನುಲಿ ರಸಪ್ರಶ್ನೆ

ಮಂಗಳೂರು: ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ಪ್ರಯುಕ್ತ ರಾಜ್ಯವ್ಯಾಪಿ ಪ್ರಸಾರದ ರಸಪ್ರಶ್ನೆ ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿ ಕೇಂದ್ರ ನಡೆಸಿಕೊಡಲಿದೆ.

ಇದೇ 6ರಿಂದ ಪ್ರತಿ ಬುಧವಾರ ರಾತ್ರಿ 8 ರಿಂದ 8.30 ರವರೆಗೆ ಇದು ಪ್ರಸಾರವಾಗಲಿದೆ. ಜನವರಿ 24ರವರೆಗೆ ಬಿತ್ತರಗೊಳ್ಳುವ ರಸಪ್ರಶ್ನೆ ಕಾರ್ಯಕ್ರಮದಲ್ಲಿ ‘ಜೈನ ಪರಂಪರೆ’ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಬಿತ್ತರಗೊಳ್ಳುವ ಈ ಕಾರ್ಯಕ್ರಮವನ್ನು ವಿದ್ವಾಂಸ ಮುನಿರಾಜ ರೆಂಜಾಳ ನಡೆಸಿಕೊಡಲಿದ್ದಾರೆ.ಆಸಕ್ತ ಕೇಳುಗರು ರಸಪ್ರಶ್ನೆಯಲ್ಲಿ ಭಾಗವಹಿಸಲು ದೂ.ಸಂ. 0824–2211999 ಅಥವಾ ಮೊಬೈಲ್ 8272038000 ಇಲ್ಲಿಗೆ ಕರೆ ಮಾಡಬಹುದು ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥೆ ಎಸ್.ಉಷಾಲತಾ ತಿಳಿಸಿದ್ದಾರೆ.

7 ಮಂದಿ ಬಂಧನ

ಉಡುಪಿ: ಚಿನ್ನಾಭರಣ ತಯಾರಿಕಾ ಕಂಪೆನಿ ಉದ್ಯೋಗಿಯನ್ನು ರೈಲಿನಲ್ಲಿ ದರೋಡೆ ಮಾಡಿದ್ದ 7 ಆರೋಪಿಗಳನ್ನು ಕಾರ್ಕಳ ಉಪ ವಿಭಾಗದ ಪೊಲೀಸರು ಬಂಧಿಸಿ, ಒಟ್ಟು ₹40.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ರಿವಾಲ್ವರ್ ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.