ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಸಾರ್‌ಗೆ ಇನ್ನೂ ಬಾರದ ಪಂಪ ಪ್ರಶಸ್ತಿ

‘ನಿತ್ಯೋತ್ಸವ ಕವಿಗೆ 80’ ವಿಚಾರ ಸಂಕಿರಣದಲ್ಲಿ ವೀರಪ್ಪ ಮೊಯಿಲಿ ವಿಷಾದ
Published : 8 ಫೆಬ್ರುವರಿ 2015, 19:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಹಿರಿಯ ಕವಿ ನಿಸಾರ್‌ ಅಹಮದ್‌  ಅವರಿಗೆ ಇದುವರೆಗೂ ಪಂಪ ಪ್ರಶಸ್ತಿ ದೊರೆತಿಲ್ಲ. ಇದು ವ್ಯವಸ್ಥೆ ಮಾಡುತ್ತಿರುವ ಹಾಸ್ಯವೋ ಅಥವಾ  ಕುತಂತ್ರವೋ ಎಂಬುದು ತಿಳಿಯುತ್ತಿಲ್ಲ’ ಎಂದು  ಸಂಸದ ಎಂ.ವೀರಪ್ಪ ಮೊಯಿಲಿ ವಿಷಾದಿಸಿದರು.

ಭಾಗವತರು ಸಾಂಸ್ಕೃತಿಕ ಸಂಘಟನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ನಯನ ಸಭಾಂಗಣದಲ್ಲಿ ಭಾನುವಾರ ಆಯೋ­ಜಿಸಿದ್ದ ‘ನಿತ್ಯೋತ್ಸವ ಕವಿಗೆ 80’ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಗಾಯನ, ಕವಿತೆ ಓದು, ಸಾಂಸ್ಕೃತಿಕ ಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎರಡು ಸಂಸ್ಕೃತಿ ನಡುವೆ ಬರೆಯುವ ಅನಿವಾರ್ಯತೆ ನಿಸಾರ್‌ ಅವರಿಗಿತ್ತು. ಆದರೆ, ಅವರು ತಮ್ಮ ಸೃಜನಶೀಲತೆ­ಯಿಂದ ಈ ಸಂಸ್ಕೃತಿ, ಆಚಾರಗಳನ್ನು ಮೀರಿ ಬೆಳೆದವರು. ಅವರನ್ನು ಯಾವುದೇ ಸಂಸ್ಕೃತಿ ಕಟ್ಟಿ ಹಾಕಲು ಸಾಧ್ಯವಾಗಿಲ್ಲ. ಅವರು ಸಂವೇದನಾ­ಶೀಲ ಕವಿ’ ಎಂದು ನುಡಿದರು.

‘ಕವಿಗಳು, ಸಾಹಿತಿಗಳು ಒಂದೊಂದು ಪ್ರಕಾರಕ್ಕೆ ಸೇರಿ, ಅಲ್ಲಿಂದ ಹೊರಗೆ ಬರದೆ ಸಿಕ್ಕಿಹಾಕಿಕೊಂಡಿರುತ್ತಾರೆ. ಆದರೆ, ನಿಸಾರ್‌ ಅವರು ನವ್ಯ, ನವೋದಯ, ದಲಿತ, ಬಂಡಾಯ ಈ ಯಾವುದೇ ಪ್ರಕಾ­ರಕ್ಕೆ ಸೇರದೆ, ತಮ್ಮ ಕಾವ್ಯಗಳ ಲಹರಿಯನ್ನು ಹರಿಯಬಿಟ್ಟವರು’ ಎಂದರು.

‘ನಿಸಾರ್‌  ಅವರ ಕಾವ್ಯಗಳು ಸಮಾಜ-­ಮುಖಿಯಾಗಿವೆ. ಅವರ ಕಾವ್ಯದಲ್ಲಿ ಯಾವುದೇ ಅಪಶ್ರುತಿ ಇಲ್ಲ’ ಎಂದು ನುಡಿದರು.
‘ನಿಸಾರ್‌ ಅವರು ಸುಮಾರು 5 ದಶಕ­ಗಳಿಂದ ಕಾವ್ಯ ಕೃಷಿಯಲ್ಲಿ ತೊಡ­ಗಿದ್ದಾರೆ. ಅವರ ಕಾವ್ಯಗಳಿಗೆ ಅನೇಕ ನೆಲೆ­ಗಳಿವೆ. ಅವರ ಕಾವ್ಯಗಳಾದ ‘ಮನಸು ಗಾಂಧಿ ಬಜಾರು’ ಹಾಗೂ ‘ನಿತ್ಯೋ­ತ್ಸವ’ ಸಾರ್ವತ್ರಿಕವಾಗಿವೆ ಮತ್ತು ಜನ­ಮನ್ನಣೆ ಗಳಿಸಿವೆ’ ಎಂದು ನುಡಿದರು.

ಲೇಖಕ ಡಾ.ಪ್ರಭುಶಂಕರ ಮಾತ­ನಾಡಿ, ‘ನಿಸಾರ್‌ ಅವರ ಕಾವ್ಯ ವಿಶಿಷ್ಟ­ವಾಗಿದೆ. ಅವರು ಯಾವುದೇ ವರ್ಗ, ಜಾತಿಗೆ ಸೇರದ ಜನತೆಯ ಕವಿಯಾಗಿ­ದ್ದಾರೆ. ನಾಡಿನ ಭಾಷೆಯನ್ನು ಉನ್ನತ ಮಟ್ಟಕ್ಕೇರಿಸಲು ಪ್ರಯತ್ನಿಸಿದ­ವರಲ್ಲಿ ನಿಸಾರ್‌ ಕೂಡ ಒಬ್ಬರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT