ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ KEA ಎಡವಟ್ಟು!

ರಾಜ್ಯದಾದ್ಯಂತ ಭಾನುವಾರ ನಡೆದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಡವಟ್ಟು ಮಾಡಿದೆ.
Published : 30 ಸೆಪ್ಟೆಂಬರ್ 2024, 4:36 IST
Last Updated : 30 ಸೆಪ್ಟೆಂಬರ್ 2024, 4:36 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಾದ್ಯಂತ ಭಾನುವಾರ ನಡೆದ ಗ್ರಾಮ ಆಡಳಿತಾಧಿಕಾರಿ (1,000 ಹುದ್ದೆ) ಹಾಗೂ ಜಿಟಿಟಿಸಿಯ (98 ಹುದ್ದೆ) ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಡವಟ್ಟು ಮಾಡಿದೆ.

ಕಡ್ಡಾಯ ಕನ್ನಡ ಭಾಷಾ ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ ದೋಷಗಳು ಕಂಡು ಬಂದಿದ್ದು, ಪರೀಕ್ಷೆ ಬರೆದ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.

'ಪ್ರಶ್ನೆ ಪತ್ರಿಕೆಯನ್ನು ನಿಮಗೆ ಬೆಳಿಗ್ಗೆ 10:25ರ ನಂತರ ಕೊಡಲಾಗುತ್ತದೆ' ಎಂದು ಮುದ್ರಿಸುವ ಬದಲು 'ಮಧ್ಯಾಹ್ನ 10:25 ರ ನಂತರ ಕೊಡಲಾಗುತ್ತದೆ' ಎಂದು ಮುದ್ರಿಸಲಾಗಿದೆ!

'ಪ್ರಶ್ನೆ ಪತ್ರಿಕೆ ಕೊಟ್ಟ ನಂತರ ಮೂರನೇ ಬೆಲ್ ಬೆಳಿಗ್ಗೆ 10:30ಕ್ಕೆ ಆಗುತ್ತದೆ' ಎಂದು ಮುದ್ರಿಸುವ ಬದಲು 'ಮಧ್ಯಾಹ್ನ 10:30 ಕ್ಕೆ ಆಗುತ್ತದೆ' ಎಂದು ಮುದ್ರಿಸಲಾಗಿದೆ!

'ಕೊನೆಯ ಬೆಲ್ ಮಧ್ಯಾಹ್ನ 12:30 ಕ್ಕೆ ಆದ ನಂತರ ಉತ್ತರಿಸುವುದನ್ನು ನಿಲ್ಲಿಸಿ' ಎಂದು ಮುದ್ರಿಸುವ ಬದಲು 'ಸಂಜೆ 12:30 ಆದ ನಂತರ ಉತ್ತರಿಸುವುದನ್ನು ನಿಲ್ಲಿಸಿ' ಎಂದು ಮುದ್ರಿಸಲಾಗಿದೆ!

ಇನ್ನು, ಓಎಂಆರ್ ಶೀಟ್‌ನ ಕನ್ನಡ ಅಕ್ಷರಗಳಲ್ಲೂ ದೋಷಗಳಾಗಿದ್ದು ಕಂಡು ಬಂದಿದೆ. ಮಾಡಬೇಕು ಎಂಬುದನ್ನು ‘ಮಾಡಬೇಡು’, ಕಪ್ಪು ಎನ್ನುವುದನ್ನು ‘ಕಷ್ಟು’, ಮೊದಲು ಎನ್ನುವುದನ್ನು ‘ಮೊದಲಾ’ ಎಂದು ಮುದ್ರಿಸಲಾಗಿದೆ.

ಇತ್ತೀಚೆಗೆ ಗೆಜೆಟೆಡ್ ‍ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಅನುವಾದದಲ್ಲಿ ಕೆಪಿಎಸ್‌ಸಿ ತಪ್ಪು ಮಾಡಿದ್ದರೂ ಕೆಇಎ ಎಚ್ಚೆತ್ತುಕೊಂಡಿಲ್ಲ. ಕನ್ನಡ ಪರೀಕ್ಷೆಯಲ್ಲಿಯೇ ಹೀಗೆ ಕನ್ನಡವನ್ನು ತಪ್ಪು ತಪ್ಪಾಗಿ ಮುದ್ರಿಸಲಾಗಿದೆ. ಇದರಿಂದ ಸಾಕಷ್ಟು ಗೊಂದಲವಾಗಿತ್ತು ಎಂದು ಕೆಲ ಅಭ್ಯರ್ಥಿಗಳು ಕೆಇಎ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಡ್ಡಾಯ ಕನ್ನಡ ಪರೀಕ್ಷೆಗೆ 5.75 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1,410 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಶೇ 50 ರಷ್ಟು ಅಂಕ ಪಡೆದವರು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಗ್ರಾಮ ಆಡಳಿತಾಧಿಕಾರಿ ಮುಖ್ಯ ಪರೀಕ್ಷೆ ಅಕ್ಟೋಬರ್ 27ಕ್ಕೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT