ಮನಿಲಾ, ಫಿಲಿಪ್ಪೀನ್ಸ್ : ಮನಿಲಾದಿಂದ 37 ಕಿ.ಮೀ ದೂರವಿರುವ ಲಗುನಾ ಸರೋವರದಲ್ಲಿ ಸಣ್ಣ ದೋಣಿ ಮಗುಚಿ 23 ಜನರು ಮೃತಪಟ್ಟಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ.

ಉತ್ತರ ಫಿಲಿಪ್ಪೀನ್ಸ್‌ಗೆ ‘ದೊಕ್ಸುರಿ’ ಚಂಡಮಾರುತ ಅಪ್ಪಳಿಸಿದ ಕೆಲ ಗಂಟೆಗಳ ನಂತರ ಈ ದುರ್ಘಟನೆ ನಡೆದಿದೆ ಎಂದು ಕರಾವಳಿ ರಕ್ಷಣಾ ಪಡೆಯ ವಕ್ತಾರ ರಿಯರ್ ಅಡ್ಮಿರಲ್ ಅರ್ಮಾಂಡೊ ಬಾಲಿಲೊ ತಿಳಿಸಿದ್ದಾರೆ.

‘ಏಕಾಏಕಿ ಬಿರುಗಾಳಿ ಬೀಸಿದ್ದರಿಂದ ದೋಣಿಯಲ್ಲಿದ್ದವರು ಭಯಭೀತರಾದರು. ಹೆಚ್ಚಿನವರು ಎಡಭಾಗಕ್ಕೆ ಬಂದ ಕಾರಣ ದೋಣಿ ಮುಳುಗಿದೆ’ ಎಂದು ಅವರು ಹೇಳಿದ್ದಾರೆ.

‘ಪ್ರಯಾಣಿಕರ ದೋಣಿ ಸ್ಥಳೀಯವಾಗಿ ಸಂಚರಿಸುತ್ತಿತ್ತು. ಘಟನೆಯಲ್ಲಿ 23 ಜನರ ಮೃತದೇಹವನ್ನು ಸರೋವರದಿಂದ ಹೊರ ತೆಗೆದಿದ್ದು, 40 ಜನರನ್ನು ರಕ್ಷಿಸಲಾಗಿದೆ. ಕಾಣೆಯಾದವರಿಗೆ ಶೋಧ ನಡೆದಿದೆ’ ಎಂದು ರಕ್ಷಣಾಧಿಕಾರಿ ಕೆನೆತ್ ಸಿರಾಡೋಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.