ಕರಾಚಿ: ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು 3 ಮಕ್ಕಳು, ಒಬ್ಬ ಮಹಿಳೆ ಸೇರಿ ಕನಿಷ್ಠ 7 ಮಂದಿ ಸಾವಿಗೀಡಾದ ದಾರುಣ ಘಟನೆ ಸಿಂಧ್ ಪ್ರಾಂತದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಕರಾಚಿಯಿಂದ ಲಾಹೋರ್‌ಗೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಬಿಸಿನೆಸ್ ಕ್ಲಾಸ್ ಬೋಗಿಯಲ್ಲಿ ಈ ಅವಘಡ ಸಂಭವಿಸಿದೆ.

ಬೋಗಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಪರಿಣಾಮ ಮಕ್ಕಳೂ, ಮಹಿಳೆ ಸೇರಿ ಸಾವಿನ ಸಂಖ್ಯೆ 7ಕ್ಕೆ ತಲುಪಿದೆ.

‘ದುರ್ಘಟನೆಗೆ ಕಾರಣ ತಿಳಿದಿಲ್ಲ. ಈ ಕುರಿತು ಪರಿಶೀಲಿಸಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ‘ ಎಂದು ಪಾಕಿಸ್ತಾನ ರೈಲ್ವೆ ಇಲಾಖೆ ವಕ್ತಾರ ಮಕ್ಸೂದ್ ಅವರು ತಿಳಿಸಿದ್ದಾರೆ.

‘ಬೆಂಕಿ ಹೊತ್ತಿದ ಮಾಹಿತಿ ಗೊತ್ತಾದ ತಕ್ಷಣ ರೈಲನ್ನು ತಾಂಡೋ ಮಸ್ತಿ ಖಾನ್ ಸ್ಟೇಷನ್ ಬಳಿ ನಿಲ್ಲಿಸಲಾಯಿತು. ಕೂಡಲೇ ಅಗ್ನಿಶಾಮಕ ದಳಕ್ಕೆ ತಿಳಿಸಲಾಯಿತು‘ ಎಂದೂ ಮಕ್ಸೂದ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.