ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೆಬನಾನ್‌: ಪೇಜರ್ ಬಳಿಕ ವಾಕಿ–ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ; 9 ಸಾವು

Published : 18 ಸೆಪ್ಟೆಂಬರ್ 2024, 16:53 IST
Last Updated : 18 ಸೆಪ್ಟೆಂಬರ್ 2024, 16:53 IST
ಫಾಲೋ ಮಾಡಿ
Comments

ಬೈರೂತ್: ಬೈರೂತ್ ಸೇರಿದಂತೆ ಲೆಬನಾನ್‌ನ ಹಲವೆಡೆ ವಾಕಿ ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ ಸಂಭವಿಸಿದ್ದು, ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಹಿಜ್ಬುಲ್ಲಾ ಅಧಿಕಾರಿಗಳು ಮತ್ತು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

9 ಮಂದಿ ಮೃತಪಟ್ಟು, 300 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮಂಗಳವಾರದ ಪೇಜರ್ ಬಾಂಬ್ ದಾಳಿಯಲ್ಲಿ 12 ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡ ಬಳಿಕ ತೀವ್ರ ಗೊಂದಲ ಮತ್ತು ಆಕ್ರೋಶದಿಂದ ಕುದಿಯುತ್ತಿರುವ ದೇಶವನ್ನು ಹೊಸ ಸ್ಫೋಟಗಳು ಮತ್ತಷ್ಟು ಕಂಗಾಲಾಗಿಸಿವೆ.

ಘಟನಾ ಸ್ಥಳದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರ ಪ್ರಕಾರ, ಹಿಜ್ಬುಲ್ಲಾದ ಮೂವರು ಸದಸ್ಯರ ಅಂತಿಮ ಯಾತ್ರೆ ವೇಳೆ ಹಲವು ಸ್ಫೋಟಗಳು ಸಂಭವಿಸಿವೆ. ದಕ್ಷಿಣ ಕರಾವಳಿ ನಗರವಾದ ಸಿಡಾನ್‌ನಲ್ಲಿ ಕಾರು ಮತ್ತು ಮೊಬೈಲ್ ಫೋನ್ ಅಂಗಡಿಯೊಳಗೆ ಸಾಧನಗಳು ಸ್ಫೋಟಗೊಂಡ ಬಗ್ಗೆ ವರದಿಯಾಗಿದೆ.

ಗುಂಪೊಂದು ಬಳಸುತ್ತಿದ್ದ ವಾಕಿ ಟಾಕಿಗಳು ಸ್ಫೋಟಗೊಂಡಿವೆ ಎಂದು ಹಿಜ್ಬುಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೈರೂತ್‌ನ ಹಲವು ಪ್ರದೇಶಗಳಲ್ಲಿ ಮತ್ತು ದಕ್ಷಿಣ ಲೆಬನಾನ್‌ನಲ್ಲಿನ ಮನೆಗಳಲ್ಲಿ ಸೌರಶಕ್ತಿ ಉಪಕರಣಗಳು ಸ್ಫೋಟಗೊಂಡಿವೆ ಎಂದು ಲೆಬನಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.

ಇದು ಹಿಜ್ಬುಲ್ಲಾ ಸದಸ್ಯರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿರುವ ದಾಳಿ ಎಂಬ ಶಂಕೆ ವ್ಯಕ್ತವಾಗಿದೆ.

ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ನೂರಾರು ಪೇಜರ್‌ಗಳು ಮಂಗಳವಾರ ಸ್ಫೋಟಗೊಂಡ ಬಳಿಕ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದರು. ಸುಮಾರು 2,800 ಜನರು ಗಾಯಗೊಂಡಿದ್ದರು.

ಮನೆಗಳು, ಕಾರುಗಳು, ಕಿರಾಣಿ ಅಂಗಡಿಗಳು ಮತ್ತು ಕೆಫೆಗಳು ಸಹ ಸ್ಫೋಟಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT