ಗೋಮಾ (ಕಾಂಗೊ): ಕಾಂಗೊದ ಪೂರ್ವ ಭಾಗದಲ್ಲಿರುವ ಲೇಕ್ ಕಿವುನಲ್ಲಿ ದೋಣಿ ಮಗುಚಿದ ಪರಿಣಾಮ ಗುರುವಾರ 78 ಜನರು ಮೃತಪಟ್ಟಿದ್ದಾರೆ.

ದೋಣಿಯಲ್ಲಿ 278 ಪ್ರಯಾಣಿಕರಿದ್ದರು. ದೋಣಿಯಲ್ಲಿ ಅದರ ಸಾಮರ್ಥ್ಯಕ್ಕೂ ಅಧಿಕ ಜನರು ಇದ್ದರು ಎಂದು ಸೌತ್ ಕಿವು ಪ್ರಾಂತ್ಯದ ಗವರ್ನರ್ ಜೀನ್–ಜಾಕ್ವೆಸ್ ಪುರುಸಿ ತಿಳಿಸಿದ್ದಾರೆ. 10 ಜನರು ಪಾರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಿಷ್ಠ 50 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದೂ ಹೇಳಿದ್ದಾರೆ.

ಕಿಟುಕು ಬಂದರಿನ ಹಡಗುಕಟ್ಟೆಯಿಂದ ಕೆಲವೇ ಮೀಟರ್ಗಳ ಅಂತರದಲ್ಲಿದ್ದಾಗ ದೋಣಿ ಮಗುಚಿ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದೋಣಿಯು ನಾರ್ತ್ ಕಿವು ಪ್ರಾಂತ್ಯದ ಗೋಮಾ ನಗರದಿಂದ ಸೌತ್ ಕಿವು ಪ್ರಾಂತ್ಯದ ಮಿನೊನಾ ನಗರಕ್ಕೆ ತೆರಳುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.