ಸಮರ್ಕಂಡ್, ಉಜ್ಬೇಕಿಸ್ತಾನ: ರಷ್ಯಾ ಜೊತೆ 'ಮಹಾ ಶಕ್ತಿ'ಗಳಾಗಿ ಕೆಲಸ ಮಾಡಲು ಚೀನಾ ಸಿದ್ಧವಿರುವುದಾಗಿ ಅಧ್ಯಕ್ಷ ಷಿ ಜಿನ್ಪಿಂಗ್ ಹೇಳಿದ್ದಾರೆ.

ಕೊರೊನಾ ನಂತರದಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಜಿನ್ಪಿಂಗ್, ‘ಮಹಾನ್ ಶಕ್ತಿಗಳ ಪಾತ್ರ ನಿಭಾಯಿಸಲು ರಷ್ಯಾದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ ಮತ್ತು ಸಾಮಾಜಿಕ ಪ್ರಕ್ಷುಬ್ಧತೆಯಿಂದ ತತ್ತರಿಸಿರುವ ಜಗತ್ತಿನಲ್ಲಿ ಸ್ಥಿರತೆ ಹಾಗೂ ಸಕಾರಾತ್ಮಕ ಶಕ್ತಿಯನ್ನು ತುಂಬಲು ಮಾರ್ಗದರ್ಶಿ ಪಾತ್ರವನ್ನು ವಹಿಸುತ್ತದೆ’ಎಂದು ಉಜ್ಬೇಕಿಸ್ತಾನದ ಸಮರ್ಕಂಡ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ನಾಯಕರ ಶೃಂಗಸಭೆಯಲ್ಲಿ(ಎಸ್ಸಿಒ) ಪುಟಿನ್ ಅವರಿಗೆ ಷಿ ಹೇಳಿದರು.

ಚೀನಾ, ರಷ್ಯಾ, ಭಾರತ, ಪಾಕಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳಾದ ಕಜಿಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನ್ಗಳು ಎಸ್ಸಿಒ ಸಂಘಟನೆಯ ಸದಸ್ಯ ರಾಷ್ಟ್ರಗಳು.

‘ಇತ್ತೀಚೆಗೆ, ನಾವು ಕೋವಿಡ್ -19 ಸಾಂಕ್ರಾಮಿಕದ ಪರಿಣಾಮಗಳಿಂದ ಹೊರಬಂದಿದ್ದೇವೆ, ಫೋನ್ ಮೂಲಕ ಹಲವು ಬಾರಿ ಮಾತನಾಡಿದ್ದೇವೆ ಮತ್ತು ಪರಿಣಾಮಕಾರಿ ಕಾರ್ಯತಂತ್ರದ ಸಂವಹನಗಳನ್ನು ಇಟ್ಟುಕೊಂಡಿದ್ದೇವೆ’ ಎಂದು ಷಿ, ಪುಟಿನ್ ಅವರಿಗೆ ತಿಳಿಸಿದರು.

‘ಸಾಮಾನ್ಯ ಕಾಳಜಿಯ ಅಂತರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ನಿಮ್ಮೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಶಾಂಘೈ ಸಹಕಾರ ಸಂಸ್ಥೆಯ ಈ ಸಭೆಯನ್ನು ಬಳಸಲು ನಾವು ಅತ್ಯಂತ ಉತ್ಸುಕರಾಗಿರಿದ್ದೇವೆ’ಎಂದು ಅವರು ಹೇಳಿದ್ದಾರೆ.

ಕ್ಸಿ, ಬುಧವಾರ ಉಜ್ಬೇಕಿಸ್ತಾನ್ಗೆ ಆಗಮಿಸಿದ್ದು, ಅಧ್ಯಕ್ಷ ಶವಕತ್ ಮಿರ್ಜಿಯೊಯೆವ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಆಳಗೊಳಿಸುವುದು ಮತ್ತು ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.